ಬೆಂಗಳೂರು: ಮಾಡಬೇಕಾದ ಕೆಲಸ ಬಿಟ್ಟು ಅದೇನೋ ಮಾಡಿದ್ರಂತೆ ಹಾಗೆ ಸಾರ್ವಜನಿಕರ ತೆರಿಗೆ ಹಣವನ್ನು ಬಿಬಿಎಂಪಿ ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಅನ್ನೊದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಆಪರೇಷನ್ ಕ್ಯಾಟ್‍ಗೆ ಕೈಹಾಕಿದೆ.
ಹೌದು. ರಾಜ್ಯಪಾಲ ವಜುಬಾಯ್ ವಾಲಾ ಅವರ ಅಧಿಕೃತ ನಿವಾಸ ರಾಜಭವನದಲ್ಲಿ ಬೆಕ್ಕುಗಳ ಕಾಟ ಜಾಸ್ತಿ ಆಗಿದ್ಯಂತೆ. ಹೀಗಾಗಿ ಬೆಕ್ಕು ಹಿಡಿದು ಸಮಸ್ಯೆ ಬಗೆಹರಿಸಿ ಅಂತ ರಾಜ್ಯಪಾಲರ ಕಚೇರಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ.
ಸಿಕ್ಕಿದ್ದೇ ಚಾನ್ಸ್ ಅಂತ ಪಾಲಿಕೆಯ ಪಶುಪಾಲನೆ ಇಲಾಖೆ ಬೀದಿನಾಯಿಗಳಂತೆ ಬೆಕ್ಕನ್ನೂ ಹಿಡಿದು ಸಂತಾನಹರಣ ಚಿಕಿತ್ಸೆಗಾಗಿ ಆಪರೇಷನ್ ಕ್ಯಾಟ್‍ಗಾಗಿ ಟೀಮ್ ರೆಡಿ ಮಾಡಿದೆ. ಗುಂಡಿ ಸಮಸ್ಯೆ, ಕಸದ ಸಮಸ್ಯೆ ಅಂತ ಜನಸಾಮಾನ್ಯರ ದೂರುಗಳಿಗೆ ಪಾಲಿಕೆಯವರು ಇಷ್ಟೊಂದು ತಲೆಕೆಡಿಸಿಕೊಂಡಿದ್ದರೆ ಬೆಂಗಳೂರು ಕಥೆನೇ ಬೇರೆ ಇರ್ತಿತ್ತು ಅಂತಾ ಜನರು ಮಾತಾಡುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv