ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೇ ಹೋದರೂ ಪಾರ್ಕಿಂಗ್ ಜಾಗದೇ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ಮುಂದಾಗಿದೆ. ಇಂದು ಸಾರ್ವಜನಿಕರು ಸ್ಮಾರ್ಟ್ ಪಾರ್ಕಿಂಗ್ ನಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ.
ನಗರದಲ್ಲಿ ಪ್ರತಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ತಮ್ಮ ವಾಹನಗಳನ್ನ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದ್ದು, ಪಾಲಿಕೆಗೆ ಇದರಿಂದ ಯಾವುದೇ ರೀತಿಯ ಆದಾಯನೂ ಇಲ್ಲ ಮತ್ತು ಟ್ರಾಫಿಕ್ ಸಮಸ್ಯೆಯುಂಟಾಗುತ್ತಿತ್ತು. ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ‘ಸ್ಮಾರ್ಟ್ ಪಾರ್ಕಿಂಗ್’ ಯೋಜನೆಯನ್ನ ಜಾರಿಗೆ ತರಲು ಪಾಲಿಕೆ ಮುಂದಾಗಿದೆ. ಇದು 85 ರಸ್ತೆಗಳಲ್ಲಿ ಪಾರ್ಕಿಂಗ್ ನೀಡುವ ಯೋಜನೆ ಇದಾಗಿದ್ದು ‘ನಮ್ಮ ಬೆಂಗಳೂರು ಆ್ಯಪ್’ನಲ್ಲಿ ಈ ಪಾರ್ಕಿಂಗ್ ನ ಎಲ್ಲಾ ಮಾಹಿತಿಗಳು ಲಭ್ಯವಾಗಲಿವೆ.
Advertisement
I encourage the public to use this facility and give us your valuable feedback. @BlrCityPolice @blrcitytraffic @CPBlr #smartparking #smartbengaluru #bangaloretraffic pic.twitter.com/DOVg0XUebn
— Rakesh Singh IAS (@BBMPAdmn) December 14, 2019
Advertisement
ಒಂದು ತಿಂಗಳು ಉಚಿತ ಹಾಗೂ ಟ್ರಯಲ್ ಗಾಗಿ ನಗರದ ಕಸ್ತೂರಿ ಬಾ ರಸ್ತೆಯಲ್ಲಿ ಈ ಸ್ಮಾರ್ಟ್ ಪಾರ್ಕಿಂಗ್ ಅಳವಡಿಸಲಾಗಿದೆ. ಇದರಿಂದ ವಾಹನಗಳ ಕಳವು ತಪ್ಪುತ್ತದೆ ಹಾಗೂ ಪಾಲಿಕೆಗೆ ಕೋಟಿಗಟ್ಟಲೇ ಲಾಭವಾಗಲಿದೆಯೆಂದು ಮೇಯರ್ ಸ್ಪಷ್ಟಪಡಿಸಿದ್ದಾರೆ.
Advertisement
I encourage the public to use this facility and give us your valuable feedback. @BlrCityPolice @blrcitytraffic @CPBlr #smartparking #smartbengaluru #bangaloretraffic pic.twitter.com/DOVg0XUebn
— Rakesh Singh IAS (@BBMPAdmn) December 14, 2019
Advertisement
ಮೊಬೈಲ್ ಫೋನ್ ನ ಆ್ಯಪ್ ಮೂಲಕ ವಾಹನ ನಿಲ್ಲಿಸಲು ಮೊದಲೇ ಪಾರ್ಕಿಂಗ್ ಜಾಗ ಪಡೆಯಬಹುದಾಗಿದೆ. ಈ ಪ್ರಾಯೋಗಿಕ ಹೈಟೆಕ್ ಯೋಜನೆಯಿಂದ ಒಟ್ಟು 3,333 ನಾಲ್ಕು ಚಕ್ರ ವಾಹನಗಳು, 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಇಲ್ಲಿ ಸಿಸಿ ಕ್ಯಾಮೆರಾಗಳನ್ನ ಅಳವಡಿಸಿದ್ದು, ಪ್ರತಿ ವಾಹನಗಳ ಚಲನ ವಲನಗಳು ದಾಖಲಾಗಲಿವೆ. ಶುಲ್ಕ ಸಂಗ್ರಹಿಸಲು ಆರಂಭಿಸಿದ ನಂತರ ಪ್ರತಿ ಗಂಟೆಗೆ 30 ರೂ. ನಿಗದಿಪಡಿಸಲಾಗಿದೆ. ಈ ಬಗ್ಗೆ ವಾಹನ ಸವಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.