ಬೆಂಗಳೂರು: ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ (BBMP) ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ.
ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳ ತಂಡ ಮಂತ್ರಿ ಮಾಲ್‌ಗೆ (Mantri Mall) ಬೀಗ ಹಾಕಿದೆ. ಇವತ್ತಿನಿಂದ ಸಾಲು ಸಾಲು ರಜೆ ಇರುವುದರಿಂದ ವೀಕೆಂಡ್‌ನಲ್ಲಿ ಮಾಲ್‌ಗೆ ಹೆಚ್ಚಿನ ಜನ ಬರುತ್ತಿದ್ದರು. ಇದನ್ನೂ ಓದಿ: ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್
Advertisement
Advertisement
ಈ ಹಿಂದೆಯೂ 8 ಬಾರಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿತ್ತು. ಮಾಲ್‌ನವರು ಕೋರ್ಟ್ ಮೂಲಕ ಬೀಗ ಓಪನ್ ಮಾಡಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ಇಂದಿನಿಂದ ಭಾನುವಾರದ ವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಮಾಲ್ ಇವತ್ತು ಓಪನ್ ಆಗಬೇಕಾದರೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದೆ.
Advertisement
Advertisement
ಮಾಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಂದು ಕಾಯ್ತಿದ್ದಾರೆ. ಬೀಗ ಹಾಕಿರುವುದನ್ನು ನೋಡಿ ಹೊರಗಡೆಯೇ ನಿಂತಿದ್ದಾರೆ. ಇದನ್ನೂ ಓದಿ: ಜಿಂದಾಲ್ ಕಾರ್ಖಾನೆಯಲ್ಲಿ ಅವಘಡ – ನೀರಿನ ಹೊಂಡದಲ್ಲಿ ಬಿದ್ದು ಮೂವರ ದುರ್ಮರಣ!