ಬೆಂಗಳೂರು: ಬಿಬಿಎಂಪಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ. ನಿಮ್ಮ ಮಕ್ಕಳಿಗೆ ಪಾಠ ಹೇಳಲ್ಲ ಎಂದು ಟೀಚರ್ಸ್ ಪ್ರತಿಭಟನೆ ಮಾಡಿದ್ದಾರೆ.
ಹೌದು. ಕಳೆದ 3 ತಿಂಗಳಿಂದ ಈ ಬಡ ಶಿಕ್ಷಕರಿಗೆ ಸಂಬಳ ಬಂದಿಲ್ಲ. ಈವರೆಗೂ ಮಕ್ಕಳಿಗಾಗಿ ಪಾಠ ಮಾಡಿ ಸುಸ್ತಾಗಿ ನಮ್ಮ ಮಕ್ಕಳ ಹೊಟ್ಟೆಗೆ ಊಟ ಕೊಡಲು ಸಂಬಳ ಬೇಕೇ ಬೇಕು ಅಂತ ಧರಣಿಗೆ ಧುಮುಕಿದ್ದಾರೆ.
Advertisement
Advertisement
ಮೂರು ತಿಂಗಳಿನಿಂದ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ಏಜೆನ್ಸಿ ಅವರನ್ನು ಕೇಳಿದ್ರೆ, ಬಿಲ್ ಪಾಸ್ ಮಾಡಿಲ್ಲ ನಾವೇನು ಮಾಡೋದು. ನಮ್ಮ ಕೈಯಿಂದ ಕೊಡೋದಕ್ಕೆ ಸಾಧ್ಯವಾಗಲ್ಲ. ಹೀಗಾಗಿ ನೀವು ಅಲ್ಲಿ ಹೋಗಿ ಕೇಳಿ ಅಂತ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೇ ಇವರನ್ನು ಕೇಳಿದ್ರೆ ಏಜೆನ್ಸಿ ಅವರನ್ನು ಕೇಳಿ. ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳುತ್ತಾರೆ. ನಮ್ಮ ಕಷ್ಟವನ್ನು ಯಾರ ಜೊತೆ ಹೇಳಿಕೊಳ್ಳುವುದು ಅಂತ ಶಿಕ್ಷಕ ನಟೇಶ್ ಅವರು ತಮ್ಮ ಅಲಳುತೋಡಿಕೊಂಡಿದ್ದಾರೆ.
Advertisement
Advertisement
ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋ ಈ 650 ಕ್ಕೂ ಹೆಚ್ಚು ಶಿಕ್ಷಕರೇ ಬಿಬಿಎಂಪಿ ಶಾಲೆಗಳ ಕಳಪೆ ಫಲಿತಾಂಶಕ್ಕೆ ಕಾರಣ ಅಂತೆ. ಹೀಗಾಗಿ ಪೌರಕಾರ್ಮಿಕರಿಗಿಂತ ಕಡಿಮೆ ಸಂಬಳ ತಗೋ ಟೀಚರ್ಸ್ ಗೆ ಸಂಬಳ ಕೊಡದೇ ಅಲೆದಾಡುವಂತೆ ಮಾಡ್ತಿದೆ ಪಾಲಿಕೆ. ಕ್ರಿಸ್ಟಲ್ ಎಂಬ ಕಂಪನಿಗೆ ಗುತ್ತಿಗೆ ನೀಡಿ ಸರ್ಕಾರ ಕೈ ಕಟ್ಟಿ ಕುಳಿತಿದೆ. ಈಗ ಟೀಚರ್ಸ್ ಸಹ ಪಾಲಿಕೆ ಆವರಣಕ್ಕೆ ಬಂದು ಧರಣಿ ಮಾಡಿದ್ದಾರೆ.
ಈ ತಿಂಗಳು ಸೇರಿದ್ರೆ ಸಂಬಳ ಸಿಗದೇ ಮೂರು ತಿಂಗಳಾಗುತ್ತೆ. ಅವರ ಟೆಂಡರ್ ಅವರು ಎಷ್ಟು ತಗೋತ್ತಿದ್ದಾರೆ ಅಂತ ಗೊತ್ತಿಲ್ಲ. ಟೀಚರ್ಸ್ ಅವರಿಗೂ ಬಿಬಿಎಂಪಿ ಕಡೆಯಿಂದ ಕೊಟ್ರೆ ಒಳ್ಳೆಯದು. ಮಕ್ಕಳನ್ನು ನೆನೆದುಕೊಂಡೇ 2 ತಿಂಗಳಿನಿಂದ ಸಂಬಳ ಇಲ್ಲದೇ ಕೆಲಸ ಮಾಡಿದ್ದೇವೆ. ಆದ್ರೆ ಇದೀಗ ನಮ್ಮ ಮಕ್ಕಳು, ನಮ್ಮ ಮನೆ ನಡೆಯಲು ನಾವು ಏನ್ ಮಾಡಬೇಕು ಅಂತ ಶಿಕ್ಷಕಿ ವೀಣಾ ತಮ್ಮ ಕಷ್ಟ ಹಂಚಿಕೊಂಡಿದ್ದಾರೆ.
ಕನಿಷ್ಟವೆಂದರೆ 6 ಸಾವಿರ, ಗರಿಷ್ಠವೆಂದರೆ 15 ಸಾವಿರ ಕೋಟಿ ಕೋಟಿ ವ್ಯವಹಾರ ಮಾಡೋ ಪಾಲಿಕೆ ಹೀಗೆ ಪಾಠ ಹೇಳೋರಿಗೆ ಅನ್ಯಾಯ ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎದುರಾಗಿದೆ. ಅಲ್ಲದೇ ಶಿಕ್ಷಕರು ಸ್ಟ್ರೈಕ್ ಹೋದ ಪರಿಣಾಮ ಇಡೀ ಶಾಲೆ ಖಾಲಿ ಖಾಲಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv