ಬೆಂಗಳೂರು: ಬಿಬಿಎಂಪಿ ಶಾಲೆಯ ಮಕ್ಕಳಿಗೆ ನಾಯಿ ಕಾಟ ಶುರುವಾಗಿದೆ. ಶ್ವಾನಕ್ಕೆ ಹೆದರಿ ಶಾಲೆ ವಿದ್ಯಾರ್ಥಿಗಳು ಬರುತ್ತಿಲ್ಲ. ಎಲ್ಲಿ ನೋಡಿದರೂ ನಾಯಿಗಳು ಕಚ್ಚಲು ಬರುತ್ತಿವೆ. ಸರಿಸುಮಾರು ಇಪ್ಪತ್ತು ನಾಯಿಗಳ ದಂಡೇ ಶಾಲೆಯ ಅಕ್ಕಪಕ್ಕವಿದೆ. ಶಾಲೆಯ ಬಾಗಿಲು ಕಾಣುವ ಮುಂಚೆ ನಾಯಿಗಳು ಕಾಣಿಸುತ್ತವೆ ಎಂದು ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
Advertisement
ಹೌದು. ಆಸ್ಟಿನ್ ಟೌನ್ ಬಿಬಿಎಂಪಿ ಬಾಲಕರ ಶಾಲೆಯ ಆವರಣದಲ್ಲಿ ನಾಯಿಗಳ ಕಾಟ ಇದೆ. ಶಾಲೆ ಆವರಣದಲ್ಲಿ ಅನಧಿಕೃತವಾಗಿ ವಾಸವಾಗಿರೋ ಕುಟುಂಬ ಹೀಗೆ ಸುಮಾರು 20 ನಾಯಿ ಸಾಕಿದೆ. ಹೀಗೆ ನಾಯಿಗಳ ಕಂಡು ಕಳೆದ ವರ್ಷ 150 ಜನ ವಿದ್ಯಾರ್ಥಿಗಳ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 120 ಕ್ಕೆ ಇಳಿದಿದೆ.
Advertisement
Advertisement
ಶಾಲೆಯಲ್ಲಿ ಆತಂಕ ಹುಟ್ಟಿಸಿರುವ ಒತ್ತುವರಿದಾರರನ್ನು ಕೇಳಿದರೆ ಪಾಲಿಕೆ ಬಾಕಿ ಉಳಿಸಿಕೊಂಡಿದೆ. 8 ಲಕ್ಷ ರೂ. ಸಂಬಳ ಕೊಡಬೇಕಿದೆ. ನನ್ನ ಗಂಡ ಈ ಶಾಲೆಯ ಸೆಕ್ಯೂರಿಟಿಯಾಗಿದ್ದರು. 5 ವರ್ಷ ಸಂಬಳ ಬಂದಿಲ್ಲ ಎಂದು ಕೊರಗುವಾಗ ಸತ್ತರು. ನಂತರ 3 ವರ್ಷದಿಂದ ಸಂಬಳ ಕೇಳುತ್ತಾ ಇದ್ದೇವೆ. ಆದರೆ ಅವರು ಕೊಡುತ್ತಿಲ್ಲ. ಸಂಬಳ ಕೊಡಿ ಜಾಗ ಬಿಟ್ಟು ಕೊಡುತ್ತೇವೆ ಎಂದು ಒತ್ತುವರಿದಾರರಾದ ನಾಗಿಣಿ ತಿಳಿಸಿದ್ದಾರೆ.
Advertisement
ಒತ್ತುವರಿದಾರರ ಬೆನ್ನಿಗೆ ಸ್ಥಳೀಯ ಶಾಸಕ ಹ್ಯಾರಿಸ್ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಮಕ್ಕಳಿಗೆ ರಕ್ಷಣೆಗೆ ಯಾರು ಇಲ್ಲ ಅನ್ನೋ ನೋವು ಕಾಡುತ್ತಿದೆ ಎಂದು ಶಾಲೆಯ ಶಿಕ್ಷಕಿ ಆತಂಕ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಶಾಲೆಯ ನಾಯಿ ಕಾಟ ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಸಿದ್ಧವಾಗಿದೆ. ಶಾಲೆಯ ಹೆಡ್ ಮಾಸ್ಟರ್ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಬೀದಿ ನಾಯಿ ರಸ್ತೆಗಳಲ್ಲಿ ಅಲ್ಲ, ಶಾಲೆಯಲ್ಲೇ ಕಾಡ್ತಾ ಇವೆ. ಪಾಲಿಕೆ ಒತ್ತುವರಿ ಬಿಡಿಸಿ ಮಕ್ಕಳ ಆತಂಕ ದೂರ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.