ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂ. ದಂಡವನ್ನು ಬಿಬಿಎಂಪಿ ವಿಧಿಸಿದೆ.
ಟ್ರಾಫಿಕ್ ಸಿಗ್ನಲ್ ನಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಇಲ್ಲದೇ ಕಾರು ಓಡಿಸಿದರೂ 500 ರಿಂದ 1,000 ಫೈನ್ ಹಾಕುತ್ತಾರೆ. ಆದರೆ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡರೆ ದಂಡ ಮಾತ್ರ 100 ರೂ. ಆಗಿರುತ್ತದೆ. ನಟ ದರ್ಶನ್ ಗೆ 2017- 18 ರ ಸಾಲಿನಲ್ಲಿ 12,024 ಆಸ್ತಿ ತೆರಿಗೆ ಕಟ್ಟಬೇಕಾಗಿತ್ತು. ಇನ್ ಟೈಂ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ 100 ರೂ. ದಂಡ ಮತ್ತು 2164 ರೂ. ಬಡ್ಡಿ ಹಾಕಿದೆ.
Advertisement
Advertisement
ನಟ ದರ್ಶನ್ 2017-18, 2018-19 ನೇ ಸಾಲಿನ 12,024 ರೂ. ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಟ್ಟಬೇಕಿತ್ತು. ಆದರೆ ದರ್ಶನ್ ತಡವಾಗಿ ಕರ ಪಾವತಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಡ್ಡಿ ಮತ್ತು ದಂಡ ವಿಧಿಸಿತ್ತು. ದರ್ಶನ್ ಆಸ್ತಿ ತೆರಿಗೆಯನ್ನು 100 ರೂ. ದಂಡ ಪಾವತಿಸಿದ್ದಾರೆ. ಆದರೆ ಬಿಬಿಎಂಪಿ ದಂಡದ ಮೊತ್ತ ಹಾಸ್ಯಾಸ್ಪದವಾಗಿದೆ. 100 ರೂ. ದಂಡ ಹಾಕಿದರೆ ಆಸ್ತಿ ತೆರಿಗೆಯನ್ನು ಯಾರು ನಿಗದಿತ ಸಮಯದಲ್ಲಿ ಪಾವತಿ ಮಾಡುತ್ತಾರೆ ಅನ್ನೋ ಪ್ರಶ್ನೆ ಈಗ ಎದುರಾಗಿದೆ.
Advertisement
ದರ್ಶನ್ ಜೊತೆಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಬಾಪೂಜಿ ಎಜುಕೇಷನ್ ಟ್ರಸ್ಟ್ 60 ಲಕ್ಷ ರೂ. ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದೆ. ಇವರ ಆಸ್ತಿ ಕೂಡ ಕೂಡಾ ಆರ್.ಆರ್ ನಗರದಲ್ಲಿ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv