ಯಾರೇ ಸ್ಟೇ ತಂದಿದ್ರೂ ತೆರವು ಮಾಡ್ತೀವಿ- ದರ್ಶನ್ ಮನೆ ತೆರವು ಬಗ್ಗೆ ಡಿಕೆಶಿ ರಿಯಾಕ್ಷನ್

Public TV
1 Min Read
DK Shivakumar 1 2

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ತನಿಖೆ ಜಟಿಲವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ದರ್ಶನ್ ಮನೆ ತೆರವು ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿ, ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡುತ್ತೇವೆ. ನೀನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ, ನಾನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ ಎಂದು ಹೇಳಿದರು.

DARSHAN HOME

ಸುದ್ದಿ ಬ್ರೇಕ್ ಮಾಡಿದ್ದ ಪಬ್ಲಿಕ್ ಟಿವಿ: ನಟ ದರ್ಶನ್ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರವಾಗುವ ಸಾಧ್ಯತೆಗಳಿವೆ. ರಾಜಕಾಲುವೆ ಒತ್ತುವರಿ ತೆರವು ಮಾಡದಂತೆ ದರ್ಶನ್ ಸ್ಟೇ ತಂದಿದ್ದರು ಎಂಬ ಸುದ್ದಿಯನ್ನು ಬಿತ್ತರಿಸಿತ್ತು. ಇದನ್ನೂ ಓದಿ: ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ

ಈ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಸಣ್ಣವರು, ದೊಡ್ಡವರು ಅಂತಾ ನೋಡಲ್ಲ ತೆರವು ಮಾಡುತ್ತೇವೆ. ಸ್ಟೇ ಇತ್ತು ನಾವು ವೆಕೆಟ್ ಮಾಡಿರಲಿಲ್ಲ. ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡುತ್ತೇವೆ. ಎಷ್ಟು ಸ್ಟೇ ತೆರವು ಆಗುತ್ತೋ ನೋಡುತ್ತೇವೆ. ಎಲ್ಲೆಲ್ಲಿ ಸ್ಟೇ ಇರುವ ಪ್ರಕರಣಗಳು ಇವೆ ಅಲ್ಲೆಲ್ಲಾ ತೆರವು ಕಾರ್ಯ ಮಾಡುತ್ತೇವೆ. ಎಷ್ಟು ಬೇಗ ಕೋರ್ಟ್ ನಲ್ಲಿ ಸ್ಟೇ ತೆರವಾಗುತ್ತೆ ನೋಡುತ್ತೇವೆ, ನಂತರ ಕ್ರಮ ವಹಿಸುತ್ತೇವೆ.

Share This Article