ಬೆಂಗಳೂರು: ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ (BBMP) ಮೊಬೈಲ್ ನೋಟಿಸ್ ಜಾರಿ ಮಾಡಲಿದೆ. ಎರಡನೇ ಹಂತದಲ್ಲಿ ಬರೋಬ್ಬರಿ ಆರು ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಜಾರಿ ಮಾಡಲು ಮುಂದಾಗಿದೆ. ಆಸ್ತಿ ತೆರಿಗೆ ಕಟ್ಟಲು ಬಾಡಿಗೆದಾರರ ಹೆಸರೇಳಿ ಮನೆ ಮಾಲೀಕರು ನುಳುಚಿಕೊಳ್ತಾ ಇದ್ದಾರೆ. ಆಸ್ತಿ ತೆರಿಗೆ (Property Tax) ಕಟ್ಟದೇ ನುಳುಚಿಕೊಳ್ತಿರುವ ಮನೆ ಮಾಲೀಕರ ವಿರುದ್ಧ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ.
ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ನಾನಾ ಕಸರತ್ತು ಮಾಡುತ್ತಿದೆ. ತೆರಿಗೆ ವಸೂಲಿಗೆ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ತೆರಿಗೆ ಪಾವತಿ ಮಾಡಿ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದೆ. ವಾಟ್ಸಾಪ್‌ಗೆ ನೋಟಿಸ್ ಕಳಿಸಲಾಗುತ್ತಿದೆ. ಆರಂಭದಲ್ಲಿ ಬರೋಬ್ಬರಿ 3.5 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಮತ್ತೆ 6 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಕಳಿಸಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಎಂಟು ವಲಯದ ಜನರಿಗೂ ನೋಟಿಸ್ ಜಾರಿ ಮಾಡುತ್ತಿದೆ. ಇದನ್ನೂ ಓದಿ: ರೈತನ ಕಾರ್ ಗ್ಲಾಸ್ ಒಡೆದು 10 ಲಕ್ಷ ರೂ. ಕಳವು – ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಆಸ್ತಿ ತೆರಿಗೆ ಪಾವತಿ ಮಾಡುವಂತೆ ಬರೀ ಮೊಬೈಲ್‌ನಲ್ಲಿ ಅಲ್ಲದೇ ಮನೆ ಮನೆಗೂ ತೆರಳಿ ನೋಟಿಸ್ ನೀಡಲಾಗುತ್ತಿದೆ. ಮನೆ ಮಾಲೀಕರು ಇಲ್ಲದ ಕಾರಣ ಬಾಡಿಗೆದಾರರಿಗೆ ನೋಟಿಸ್ ಕೊಟ್ಟು ಬರುತ್ತಾ ಇದ್ದಾರೆ. 8 ರಿಂದ 10 ವರ್ಷಗಳ ಕಾಲ ವಾಸ ಇರುವ ಬಾಡಿಗೆದಾರರೇ ಆಸ್ತಿ ತೆರಿಗೆ ಪಾವತಿಸಲಿ ಎಂದು ಹೇಳಿ ಕೆಲ ಮನೆ ಮಾಲೀಕರು ನುಳುಚಿಕೊಳ್ಳಲು ಮುಂದಾಗಿದ್ದರು. ಆಸ್ತಿ ತೆರಿಗೆ ಯಾರ ಹೆಸರಲ್ಲಿ ಇದೆಯೋ ಅವರೇ ಆಸ್ತಿ ತೆರಿಗೆ ಪಾವತಿ ಮಾಡಬೇಕು. ಇಲ್ಲದೇ ಹೋದರೆ ಕಾನೂನು ಪ್ರಕಾರ ಕ್ರಮವಹಿಸುತ್ತೇವೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ. ಬಾಡಿಗೆದಾರರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗ್ಳೂರಲ್ಲಿ ನ. 25, 26ರಂದು ಕಂಬಳ