ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

Public TV
2 Min Read
indira canteen 3

– ಅಕ್ರಮ ತಡೆ, ಗುಣಮಟ್ಟದ ಆಹಾರ ನೀಡಲು ಬಿಬಿಎಂಪಿ ಪ್ಲ್ಯಾನ್‌
– ಎಲ್‌ಇಡಿ ಸ್ಕ್ರೀನ್‌ನಲ್ಲಿ ಊಟದ ಮೆನು ಪ್ರದರ್ಶನ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನ (Indira Canteen) ಅಪ್‌ಗ್ರೇಡ್‌ ಮಾಡಲು ಬಿಬಿಎಂಪಿ (BBMP) ಮುಂದಾಗಿದೆ. ಬಡವರ ಹೊಟ್ಟೆ ತುಂಬಿಸೋ ಈ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡಲು ಪಾಲಿಕೆ ಮುಂದಾಗಿದ್ದು, ಇನ್ಮುಂದೆ ಗ್ರಾಹಕರು ಎಲ್‌ಇಡಿ ಮಾದರಿಯ ಮಿಷಿನ್ ಮೂಲಕ ಇಂದಿರಾ ಕ್ಯಾಂಟೀನ್ ಊಟವನ್ನ ಬುಕ್ಕಿಂಗ್‌ ಮಾಡಬಹುದು.

indira canteen 2

ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್‌ ಸ್ಪರ್ಧ ನೀಡಲು ಮುಂದಾಗಿರುವ ಬಿಬಿಎಂಪಿ ಎಲ್‌ಇಡಿ ಮಾದರಿಯ ಮಿಷಿನ್‌ ಸ್ಕ್ರೀನ್‌ ಅಳವಡಿಸಿ, ಅದರಲ್ಲೇ ಊಟ ಬುಕ್‌ ಮಾಡುವ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ. ಪ್ರಾಥಮಿಕ ಹಂತವಾಗಿ ರಾಜರಾಜೇಶ್ವರಿ ನಗರ ವಲಯದಲ್ಲಿ 11 ಕ್ಯಾಂಟೀನ್‌ಗಳಲ್ಲಿ‌ ಅನುಷ್ಟಾನಗೊಳಿಸಲಾಗಿದೆ. ಯಾವ ಕ್ಯಾಂಟೀನ್‌ಗಳಲ್ಲಿ ಎಷ್ಟು ಊಟ (Indira Canteen Food) ಹೋಗಿದೆ? ಊಟದ ಗುಣಮಟ್ಟ ಹೇಗಿದೆ? ಅನ್ನೋದನ್ನ ತಕ್ಷಣಕ್ಕೆ ತಿಳಿಯಬಹುದು. ಈ ಮೂಲಕ ಊಟವನ್ನ ಪಾರ್ಸೆಲ್ ಮಾಡಿ ಸೇಲ್ ಮಾಡೋದು, ಕ್ವಾಲಿಟಿ ಇಲ್ಲ ಅನ್ನೋ ದೂರುಗಳನ್ನ ತಡೆಗಟ್ಟಬಹುದು. ತಾಂತ್ರಿಕತೆ ಅಭಿವೃದ್ಧಿಪಡಿಸುವುದು ಸರಿ ಆದ್ರೆ ಅನಕ್ಷರಸ್ಥರು ಹೇಗೆ ಇದನ್ನ ಆಪರೇಟ್ ಮಾಡ್ತಾರೆ. ಅವ್ರು ಹೇಗೆ ಊಟವನ್ನ ತೆಗೆದುಕೊಳ್ತಾರೆ? ಅನ್ನೋದನ್ನ ಕೆಲ ಗ್ರಾಹಕರು ಪ್ರಶ್ನೆ ಮಾಡ್ತಿದ್ದಾರೆ.

indira canteen

ಬುಕ್ಕಿಂಗ್‌ ಕಾರ್ಯ ಹೇಗೆ?
ಸೆಲ್ಫ್ ಕಿಯೋಕ್ಸ್ ಮಿಷಿನ್ ಅಳವಡಿಕೆಯಲ್ಲಿ ಊಟದ ಮೆನುವನ್ನ, ಮೊದ್ಲೇ ಪ್ರೊಗ್ರಾಮಿಂಗ್ ಮಾಡಲಾಗುತ್ತದೆ. ಮೆನುವಿನಲ್ಲಿದ್ದ ಯಾವ ಊಟ ಬೇಕೋ, ಆ ಊಟವನ್ನ ಆಯ್ಕೆ ಮಾಡಿಕೊಂಡ್ರೆ, ಕ್ಯಾಂಟೀನ್ ಸಿಬ್ಬಂದಿ ಕೊಡುತ್ತಾರೆ. ಇದಕ್ಕಿಂತ ಮೊದಲು ಮೂರು ತಂತ್ರಜ್ಞಾನಗಳನ್ನ ಬಳಸಿಕೊಂಡು ಟ್ರಯಲ್‌ ಟೆಸ್ಟ್ ಮಾಡಿದ್ರೂ, ಸಕ್ಸಸ್ ಆಗಿರಲಿಲ್ಲ. ಹೀಗಾಗಿ ಇದೀಗಾ ಹೊಸ ವ್ಯವಸ್ಥೆಗೆ ಪಾಲಿಕೆ ಮುಂದಾಗಿದೆ. ಐಟಿ ವಿಭಾಗಕ್ಕೆ ಈಗಾಗಲೇ ಕಡತ ಕಳುಹಿಸಿರುವ ಬಿಬಿಎಂಪಿ, ಈ ಹೊಸ ವ್ಯವಸ್ಥೆ ಜಾರಿಗೆ ತರಲು ಟೆಂಡರ್ ಕರೆಯೋದಕ್ಕೂ ಮುಂದಾಗಿದೆ.

ಸೆಲ್ಫ್ ಕಿಯೋಕ್ಸ್ ಮಿಷಿನ್ ಹೇಗೆ ಕೆಲಸ ಮಾಡುತ್ತೆ?
* ಸೆಲ್ಫ್ ಕಿಯೋಕ್ಸ್ ಮಿಷಿನ್‌ನಲ್ಲಿ ಊಟದ ಮೆನು ಸೇರಿ, ಯೋಜನೆಯ ಎಲ್ಲಾ ಮಹಿತಿಯನ್ನ ಮೊದಲೇ ಪ್ರೋಗ್ರಾಮಿಂಗ್‌ ಮಾಡಲಾಗುತ್ತೆ.
* ಊಟವನ್ನ ರಿಸರ್ವ್ ಮಾಡಲು ಆಪರೇಟ್ ಮಾಡುವಾಗ ಗ್ರಾಹಕನ ಫೋಟೋ ಕ್ಲಿಕ್ಕಿಸುತ್ತೆ
* ಒಬ್ಬ ವ್ಯಕ್ತಿಗೆ ಎಷ್ಟು ಊಟ ಕೊಡಬೇಕು ಅನ್ನೋದು ಮೊದಲೇ ನಮೂದು ಆಗಿರುತ್ತೆ
* ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟದ ಸಮಯದಲ್ಲಿ ಮಾತ್ರ ಇದು ಕಾರ್ಯಾಚರಣೆ ಮಾಡುತ್ತೆ
* ಒಂದು ದಿನಕ್ಕೆ ಎಷ್ಟು ಊಟ ಸೇಲ್ ಆಗಿದೆ, ಊಟದ ಕ್ವಾಲಿಟಿಯನ್ನೂ ಇದು ತೋರಿಸುತ್ತದೆ
* ಸೀಮಿತ ತಿಂಗಳವರೆಗೆ, ಊಟ ಖರೀದಿಸಿದ ಗ್ರಾಹಕರ ಮಾಹಿತಿಯ ಡೆಟಾ, ಬಿಬಿಎಂಪಿ ಸರ್ವರ್‌ನಲ್ಲಿ ನೊಂದಣಿಯಾಗುತ್ತೆ
* ಎಷ್ಟು ಊಟ ಮಾರಾಟವಾಗಿದ್ಯೋ ಅಷ್ಟು ಹಣವನ್ನ ಟೆಂಡರ್ ದಾರರಿಗೆ ನೀಡಲು ಸಹಕಾರಿ. ಅಕ್ರಮ ತಡೆಗೆ ಅನುಕೂಲ

ಡಿಜಿಟಲ್ ವ್ಯವಸ್ಥೆ ಮಾಡುವ ಉದ್ದೇಶ ಏನು?
* ಮೂರು ಮುಖ್ಯ ಉದ್ದೇಶಗಳನ್ನಿಟ್ಟುಕೊಂಡು ಈ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ.
* ಊಟ ಬಡಿಸೋದ್ರಲ್ಲಿ ಹೆಚ್ಚು ಕಡಿಮೆಯಾಗ್ತಿದೆ ಅನ್ನೋ ದೂರುಗಳನ್ನ ತಪ್ಪಿಸಲು
* ಯಾವ ಕ್ಯಾಂಟೀನ್‌ಗಳು ಹೇಗೆ ಕಾರ್ಯಾಚರಣೆ ಮಾಡ್ತಿವೆ?
* ರಿಪೋರ್ಟ್ ಜನರೇಶನ್ ಬಗ್ಗೆ ತಕ್ಷಣಕ್ಕೆ ಮಾಹಿತಿ ಪಡೆಯಬಹುದು. ಊಟ ಪಡೆದ ಗ್ರಾಹಕರ ಸಂಖ್ಯೆಯ ಮಾಹಿತಿಯನ್ನ ಸುಲಭವಾಗಿ ಪಡೆಯಬಹುದು ಅನ್ನೋ ಕಾರಣಕ್ಕೆ ಡಿಜಿಟಲ್‌ ಸ್ಪರ್ಧ ನೀಡಲಾಗುತ್ತಿದೆ.

Share This Article