ಬೆಂಗಳೂರು: ಬಿಬಿಎಂಪಿ (BBMP) ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡುತ್ತಿದ್ದಾರೆ. ಗುಂಡಿ ಮುಚ್ಚೋದು ನಮ್ಮ ಬದ್ಧತೆ. ನಮ್ಮ ಕರ್ತವ್ಯ ಇದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಡೆಡ್ ಲೈನ್ ಮುಗಿದರೂ ಬಿಬಿಎಂಪಿಯಿಂದ ಗುಂಡಿ ಮುಚ್ಚದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪಾಲಿಕೆ ಅಧಿಕಾರಿಗಳು ನಾನು ಹೇಳಿದ ಮೇಲೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತೀ ಗುಂಡಿ ಲೆಕ್ಕ ನನ್ನ ಬಳಿ ಇದೆ. ನನ್ನ ಫೋನ್‌ನಲ್ಲಿ ಇದೆ. 2-3 ದಿನಗಳಲ್ಲಿ ನಾನು ರಾತ್ರಿ ರೌಂಡ್ಸ್ ಮಾಡುತ್ತಿದ್ದೇನೆ. ದೊಡ್ಡ ಅಭಿಯಾನದ ರೀತಿ ಗುಂಡಿ ಮುಚ್ಚೋ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ: ನಿಖಿಲ್ ಕುಮಾರಸ್ವಾಮಿ
- Advertisement
ಇದೊಂದು ದೊಡ್ಡ ಸಾಧನೆ ಅಂತ ನಾನು ಹೇಳುತ್ತಿಲ್ಲ. ಆದರೆ ಒಂದು ಪ್ರಯತ್ನ ಎಂದು ಮಾಡಿದ್ದೇವೆ. ಕ್ವಾಲಿಟಿ ಹೇಗಿದೆ ಅಂತ ನಾನೇ ಪರಿಶೀಲನೆ ಮಾಡುತ್ತೇನೆ. ಕೆಲಸ ಆಗುತ್ತಿದೆ. ಒಂದೇ ದಿನಕ್ಕೆ ಆಗಲ್ಲ. ಮಳೆ, ಬೇರೆ ವಿಚಾರ ಎಲ್ಲಾ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ನಮ್ಮ ಬದ್ಧತೆ ಇದೆ. ನಮ್ಮ ಕರ್ತವ್ಯ ಇದು. ನಾಗರೀಕರಿಗೆ ಜನರಿಗೆ ಅನುಕೂಲ ಮಾಡೋ ಕೆಲಸ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ನಾನು ಹೋಗಿದ್ದೇನೆ. ದೆಹಲಿಯಲ್ಲಿ ಹೋಗಿದ್ದೇನೆ. ಆ ವಿಡಿಯೋ ನಾನು ಹಾಕಿದರೆ ಅವರ ರಾಜ್ಯಕ್ಕೆ ಅವಮಾನ ಆಗುತ್ತದೆ. ಅದಕ್ಕಿಂತ ನಮ್ಮವರು ಚೆನ್ನಾಗಿ ಪರಿವರ್ತನೆ ಮಾಡಬೇಕು ಎಂದು ಪ್ರಯತ್ನ ಮಾಡಿದ್ದೇನೆ. ಯಶಸ್ವಿ ಆಗುತ್ತಿದ್ದೇವೆ ಎಂದು ಬಿಬಿಎಂಪಿ ಗುಂಡಿ ಮುಚ್ಚುವ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ
- Advertisement