ಬೆಂಗಳೂರು: ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಾಲ್ವರು ಕಿಡಿಗೇಡಿಗಳು ಗೃಹ ಬಂಧನದಲ್ಲಿಟ್ಟು ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ವಿಜಯನಗರ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ನಡೆದಿದೆ.
ಅದೊಂದು ಕೋಮಿನ ಸೈಟ್‍ಗೆ ಬಿಬಿಎಂಪಿ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ರು. ಇದಕ್ಕೆ ಮತ್ತೊಂದು ಕೋಮಿನವರು ಆಕ್ರೋಶ ವ್ಯಕ್ತಪಡಿಸಿ ಖಾತೆ ಕ್ಯಾನ್ಸಲ್ ಮಾಡುವಂತೆ ದೂರು ಕೂಡ ಕೊಟ್ಟಿದ್ರು. ಖಾತೆ ಮಾಡಲು ಆದೇಶ ಕೂಡ ಆಗಿತ್ತು. ಆದರೆ ಈಗ ಆ ದಾಖಲೆಗಳು ಪಾಲಿಕೆ ಕಚೇರಿಯಿಂದ ಮಂಗಮಾಯವಾಗಿದೆ. ಇದಕ್ಕೆ ಕೆರಳಿದ ಗುಂಪೊಂದು ಏಕಾಏಕಿ ಪಾಲಿಕೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
Advertisement
Advertisement
ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿಯನ್ನು ಕಚೇರಿ ಬಂಧನಲ್ಲಿಟ್ಟು ಡೋರ್ ಕ್ಲೋಸ್ ಮಾಡಿ, ದಾಖಲೆಗಳು ಬೇಕು ಅಷ್ಟೆ ಅಂತ ಅವಾಜ್ ಹಾಕಿದ್ದಾರೆ. ವಿಜಯನಗರದ ವಾರ್ಡ್ ನಂ- 124ರ ಹೊಸಹಳ್ಳಿಯಲ್ಲಿರುವ ಒಂದು ಟ್ರಸ್ಟ್ ಗೆ, ಬಿಬಿಎಂಪಿಯ ಜಾಗವನ್ನು ಸೇರಿಸಿ ಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ರು. ಆದರೆ ಆ ದಾಖಲೆಗಳು ಈಗ ಕಾಣೆಯಾಗಿವೆ. ಅದನ್ನು ಹುಡಿಕಿ ಅಂತ ಸ್ಥಳೀಯ ಶಿವಕುಮಾರ್ ಹಾಗೂ ತನ್ನ 25 ಜನರ ಪಟಾಲಂ ಬಿಬಿಎಂಪಿ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಕಚೇರಿ ಬಂದ್ ಮಾಡಿ ರಾತ್ರಿ 10 ಗಂಟೆಯವರೆಗೆ ಕೂಡಿ ಹಾಕಿ ಮೊಬೈಲ್ ಕಸಿದುಕೊಂಡು ಅವಾಜ್ ಹಾಕಿದ್ದಾರೆ ಅಂತ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಸಿದ್ದಾರೆ.
Advertisement
Advertisement
ವಿಜಯನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸಂಜೆ 5 ರಿಂದ ರಾತ್ರಿ 10 ಗಂಟೆಯ ತನಕ ಪಾಲಿಕೆ ಅಧಿಕಾರಿಗಳನ್ನ ಕಚೇರಿಯಲ್ಲಿಯೇ ಕಿಡಿಗೇಡಿಗಳು ಲಾಕ್ ಮಾಡಿದ್ದಾರೆ. ಈ ವೇಳೆ 15ಕ್ಕೂ ಹೆಚ್ಚು ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ರಂತೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್, ಬ್ಯಾಗ್ ಗಳನ್ನ ಕಸಿದುಕೊಂಡು ಫೈಲ್ ಹುಡ್ಕುವಂತೆ ಧಮ್ಕಿ ಹಾಕಿದ್ದಾರೆ.
ವಾಡ್9 124 ಹೊಸಹಳ್ಳಿಯ ಇಸ್ಲಾಮಿಕ್ ವೆಲ್ ಫೇರ್ ಟ್ರಸ್ಟ್ ಗೆ ಸರ್ಕಾರಿಯ ಐದು ಅಡಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು ಆ ಖಾತಾ ರದ್ದು ಮಾಡುವಂತೆ ಸ್ಥಳೀಯ ಶಿವಕುಮಾರ್ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಆ ಫೈಲ್ ಸಿಕ್ಕಿಲ್ಲ, ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ. ಆದರೆ ಏಕಾಏಕಿ ಕಳೆದ ನಾಲ್ಕು ದಿನದ ಹಿಂದೆ ಕಚೇರಿಗೆ ನುಗಿದ್ದ ಶಿವಕುಮಾರ್ ಹಾಗೂ ತನ್ನ 25 ಮಂದಿಯಿಂದಿಗೆ ಬಿಬಿಎಂಪಿ ಆಫೀಸ್ ಬಾಗಿಲು ಹಾಕಿ ಕಡತಗಳನ್ನು ಹುಡುಕುವಂತೆ ಧಮ್ಕಿ ಹಾಕಿದ್ದಾರೆ. ಈ ವೇಳೆ ಇದನ್ನು ವಿಡಿಯೋ ಮಾಡಲು ಬಂದ ಮಹಿಳಾ ಸಿಬ್ಬಂದಿಯ ಫೋನ್ ಕಸಿದುಕೊಂಡು ನಿಂದಿಸಿದ್ದಾರಂತೆ. ರಾತ್ರಿ 10 ಗಂಟೆಯವರೆಗೆ ಕಚೇರಿ ಬಂಧನದಲ್ಲಿಟ್ಟಿದ್ದಾರೆ. ನಂತರ ಸೌತ್ ಜೆಸಿ ವೀರಭದ್ರ ಸ್ವಾಮಿ ನಾಳೆ ದಾಖಲೆಯನ್ನು ಹುಡುಕಿಕೊಡ್ತಿವಿ ಅಂತ ಹೇಳಿದ ಮೇಲೆ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳಿಸಿದ್ದಾರಂತೆ.
ಬಿಬಿಎಂಪಿ ಅಧಿಕಾರಿಗಳ ಆರೋಪವನ್ನ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಕಡತಗಳನ್ನ ಕೇಳಿದ್ದೇನೆ. ಆದರೆ ನಾನು ಅಧಿಕಾರಿ, ಸಿಬ್ಬಂದಿಯನ್ನು ಗೃಹ ಬಂಧನದಲ್ಲಿ ಇಟ್ಟಿಲ್ಲ ಅಂತಿದ್ದಾರೆ. ನಾಳೆಯೊಳಗೆ ಶಿವಕುಮಾರ್ ಗ್ಯಾಂಗ್ ನನ್ನ ಬಂಧಿಸಬೇಕು. ಇಲ್ಲವಾದರೆ ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗ್ತಾರೆ ಅಂತ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಎಚ್ಚರಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಶಿವಕುಮಾರ್ ಹಾಗೂ ಟೀಂ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಬೇಕಂತಲೇ ಶಿವಕುಮಾರ್ ಮೇಲೆ ಆರೋಪ ಮಾಡಿದ್ರಾ ಅಥವಾ ನಿಜವಾಗಿಯೂ ಶಿವಕುಮಾರ್ ಪಾಲಿಕೆ ಕಚೇರಿಗೆ ಹೋಗಿ ದಾಂಧಲೆ ನಡೆಸಿದ್ರಾ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.