ಬೆಂಗಳೂರು: ನಗರದ 120 ಕಂದಾಯಾಧಿಕಾರಿಗಳ ರಕ್ಷಿಸಿ, ತನಿಖೆ ಹೆಸ್ರಲಿ ಟಾರ್ಚರ್ ಕೊಡಬೇಡಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದರು.
ಚಿಲುಮೆ (Chilume) ವೋಟರ್ ಐಡಿ (Voter ID) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಚಿಲುಮೆ ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ. ಆದರೆ ಹಗರಣಕ್ಕೆ ಸಂಬಂಧಿಸಿ ಒಂದೇ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು. ಈಗ 10 ಪೊಲೀಸ್, ಪ್ರಾದೇಶಿಕ ಆಯುಕ್ತರ ಕಚೇರಿ, ಚುನಾವಣಾಧಿಕಾರಿ ಕಚೇರಿಯವರು ತನಿಖೆ ಮಾಡುತ್ತಿದ್ದಾರೆ. ಇದರಿಂದಾಗಿ ನಾವು ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವ್ ಬಿಬಿಎಂಪಿ ಕಂದಾಯಾಧಿಕಾರಿಗಳು ಕೆಲಸ ಮಾಡಿ ಟಾರ್ಚರ್ ಅನುಭವಿಸ್ತಾ ಇದ್ದೇವೆ. ಅಷ್ಟೇ ಅಲ್ಲದೇ ತಡರಾತ್ರಿವರೆಗೆ ಮಹಿಳಾ ಅಧಿಕಾರಿಗಳನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ಮಾನಸಿಕ ಚಿತ್ರ ಹಿಂಸೆ ತಡೆಯಲು ಆಗಲ್ಲ. 10 ಸ್ಟೇಷನ್‌ಗಳ ಹತ್ತಿ ಇಳಿದು ಸಾಕಾಗಿದೆ. ತಡರಾತ್ರಿ 4 ಗಂಟೆಯವರೆಗೂ ತನಿಖೆ ಮಾಡ್ತಾರೆ. ನಿದ್ದೆಯಿಲ್ಲ, ಬದುಕು ಕಷ್ಟವಾಗಿದೆ. ಈ ರೀತಿ ಆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ
ಚುನಾವಣೆಗಾಗಿ ಕೆಲಸ ಮಾಡುತ್ತೇವೆ. ಈ ರೀತಿ ಬಿಟ್ಟಿ ಕೆಲಸಕ್ಕೆ ವರ್ಷಕ್ಕೆ ಗೌರವ ಧನ 7 ಸಾವಿರ ರೂ. ನೀಡುತ್ತಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಬಿಎಲ್‌ಒಗಳನ್ನು ಅಧಿಕೃತವಾಗಿ ನೇಮಿಸಬೇಕು ಎಂದ ಅವರು, ಸದ್ಯ ಯಾವುದೇ 6 ಲಕ್ಷ ಹೆಸರು ಡಿಲೀಷನ್ ಫೈನಲ್ ಕಾಪಿ ಆಗಿಲ್ಲ. ಇದು ಕೇವಲ ಡ್ರಾಫ್ಟ್ ನೋಟ್ ಮೇಲೆ ಆಗಿರುವ ಡಿಲೀಷನ್ ಆಗಿದೆ. ಆಡಿಷನ್, ಡಿಲಿಷನ್‌ನಿಂದ ಅಧಿಕಾರಿಗಳಿಗೆ ಯಾವುದೇ ಲಾಭ ಆಗಲ್ಲ. ದೂರು ಕೊಟ್ಟ ನಮಗೆ ಟಾರ್ಚರ್ ಯಾಕೆ ಕೊಡ್ತೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: 24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್