– 200ಕ್ಕೂ ಹೆಚ್ಚು ಪಬ್‌ಗಳಿಗೆ ಬಿಬಿಎಂಪಿ ನೋಟಿಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ 200ಕ್ಕೂ ಅಧಿಕ ಬಾರ್, ಪಬ್ ಹಾಗೂ ಹೋಟೆಲ್‌ಗಳಿಗೆ ಬಿಬಿಎಂಪಿ (BBMP) ನೋಟಿಸ್ ಜಾರಿ ಮಾಡಿದೆ. ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಿಸದಿದ್ರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ತಹಶೀಲ್ದಾರ್ ಕಚೇರಿಯಲ್ಲಿ ಅಗ್ನಿ ಅವಘಡ; ಮಹತ್ವದ ದಾಖಲೆಗಳು ಭಸ್ಮ
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿರುವ 200ಕ್ಕೂ ಅಧಿಕ ಬಾರ್, ಪಬ್ ಹಾಗೂ ಹೊಟೇಲ್‌ಗಳಿಗೆ ನೋಟಿಸ್ ನೀಡಿದೆ. ಈ ಮೂಲಕ ಎಲ್ಲಾ ಹೋಟೆಲ್‌ಗಳಲ್ಲಿ 20ಕ್ಕಿಂತ ಹೆಚ್ಚು ಆಸನಗಳಿರುವ ಸ್ಮೋಕಿಂಗ್ ಝೋನ್‌ನ್ನು ನಿರ್ಮಿಸಬೇಕು ಎಂದಿದೆ.
ಸದ್ಯ ಸ್ಮೋಕಿಂಗ್ ಝೋನ್ ಇಲ್ಲ ಎಂಬ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಬಂದ ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಾಣ ಮಾಡದಿದ್ದರೆ ಹೊಟೇಲ್‌ಗಳ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ತಿಳಿಸಿದೆ.ಇದನ್ನೂ ಓದಿ: ಮಾಲೀಕನನ್ನ ಅರಸಿ 1,790 ಕಿಮೀ ಪ್ರಯಾಣ – ಚಿಕ್ಕ ವಯಸ್ಸಲ್ಲೇ ಮಂಡ್ಯದ ಪಾರಿವಾಳ ದಾಖಲೆ