ಬೆಂಗಳೂರು: ರೈತರ ಸಾಲ ಮನ್ನಕ್ಕೆ ಮುಂದಾಗಿರುವ ಎಚ್‍ಡಿ ಕುಮಾರಸ್ವಾಮಿಯವರಿಗೆ ಅಭಿನಂದನೆ ತಿಳಿಸಿದ ಬಿಬಿಎಂಪಿ ಸದಸ್ಯರು, ಎಲ್ಲಾ ಸದಸ್ಯರ ಒಂದು ತಿಂಗಳ ವೇತನವನ್ನು ಸಾಲಮನ್ನಾಕ್ಕಾಗಿ ಸಹಾಯ ಧನವನ್ನಾಗಿ ನೀಡಲು ನಿರ್ಧರಿಸಿದ್ದಾರೆ.
ಶುಕ್ರವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಎಲ್ಲಾ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದ್ದು, ಪ್ರತಿ ಸದಸ್ಯರ ಮಾಸಿಕ ತಲಾ 7,500 ರೂ. ಹಾಗೂ ಹೆಚ್ಚುವರಿ ಭತ್ಯೆಯಾಗಿ ದೊರೆಯುವ 1ಸಾವಿರ ರೂ. ಅಲ್ಲದೇ ಮೇಯರ್ ರ 20 ಸಾವಿರ ರೂ., ಉಪ ಮೇಯರ್ 16 ಸಾವಿರ ರೂ. ವೇತನವನ್ನು ನೀಡುವುದಾಗಿ ತೀರ್ಮಾನಿಸಿದ್ದಾರೆ. ಅದರಂತೆ, ಒಟ್ಟಾರೆಯಾಗಿ ಬಿಬಿಎಂಪಿಯಿಂದ 17.18 ಲಕ್ಷ ರೂ.ಗಳನ್ನು ಸಾಲಮನ್ನಕ್ಕಾಗಿ ನೀಡಲಾಗುತ್ತಿದೆ.
Advertisement
Advertisement
ಇನ್ನು ಸಭೆ ಆರಮಭವಾಗುತ್ತಿದಂತೆ ರಾಜ್ಯ ಬಜೆಟ್ ಸ್ವಾಗತಿಸಿದ ಕಾಂಗ್ರೆಸ್ ಪಕ್ಷದ ನಾಯಕ ಶಿವರಾಜ್ ಅವರು, ಬಜೆಟ್‍ನಲ್ಲಿ ಬೆಂಗಳೂರಿಗೆ ಅನೇಕ ಕೊಡುಗೆ ನೀಡಲಾಗಿದೆ. ಮೆಟ್ರೋ, ರಸ್ತೆ, ಮೂಲಭೂತ ಸೌಕರ್ಯ ನೀಡಿರುವುದು ಸ್ವಾಗತ. ರೈತರ ಸಾಲ ಮನ್ನಾ ಮಾಡಿರುವುದು ಉತ್ತಮ ಬೆಳವಣಿಗೆ. ಬೆಂಗಳೂರು ನಗರ ಜನ ರೈತರನ್ನೇ ನಂಬಿಕೊಂಡಿದ್ದಾರೆ. ಅದ್ದರಿಂದ ಸಾಲಮನ್ನಾ ನೇರವಾಗಲು ಒಂದು ತಿಂಗಳ ಸದಸ್ಯರ ವೇತನ ನೀಡುವಂತೆ ಮನವಿ ಮಾಡಿದದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್, ನನ್ನ ಎರಡು ತಿಂಗಳ ಕೊಡುತ್ತೇನೆಂದರು. ಅಲ್ಲದೇ ವಿರೋಧ ಪಕ್ಷದ ಸದಸ್ಯರು ಸಹ ಒಪ್ಪಿಗೆ ಸೂಚಿಸಿದರು.