ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆ, ಈಗ ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ನ್ನ ಸೈಡ್ ಹೊಡೆಯೋಕೆ ತಯಾರಿ ನಡೆಸ್ತಿದೆಯಾ..? ಇದೇ ಪ್ರಶ್ನೆ ಈಗ ಮೈತ್ರಿ ಸರ್ಕಾರದ ಅಂಗಳದಲ್ಲಿದೆ. ಬಿಬಿಎಂಪಿಯಲ್ಲಿದ್ದ ಮೈತ್ರಿ ದೋಸ್ತಿ ರಾಜ್ಯ ಸರ್ಕಾರದಲ್ಲಿ ಮುಂದುವರೆದಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಲ್ಲೆಡೆ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿತ್ತು. ಇದನ್ನು ನೋಡಿದ ಜೆಡಿಎಸ್ ಮುಖಂಡ ಶರವಣ, ಅಪ್ಪಾಜಿ ಕ್ಯಾಂಟೀನ್ ಮಾಡಿದ್ದು. ಇದೀಗ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ನಗರದೆಲ್ಲೆಡೆ ಅಪ್ಪಾಜಿ ಕ್ಯಾಂಟೀನ್ ತೆರೆಯಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.
Advertisement
Advertisement
ಜೆಡಿಎಸ್‍ನ ಎಲ್ಲಾ ಬಿಬಿಎಂಪಿ ಸದಸ್ಯರು ಅಪ್ಪಾಜಿ ಕ್ಯಾಂಟೀನ್‍ನ ಮೆನುವಿಗೆ ಮೊರೆ ಹೋಗಿದ್ದಾರಂತೆ. ಊಟಕ್ಕೆ ಮುದ್ದೆ, ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡುವ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯಬೇಕು ಅಂತಾ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎರಡೂ ಕಡೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಆಡಳಿತ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯುವ ಸಂಬಂಧ, ಜೆಡಿಎಸ್ ಸದಸ್ಯರ ಆಗ್ರಹದ ಬಗ್ಗೆ ಪಾಲಿಕೆ ಮೇಯರ್ ಸಂಪತ್ ರಾಜ್‍ರನ್ನು ಕೇಳಿದ್ರೆ, ಈ ಬಗ್ಗೆ ಮಾಹಿತಿ ಬಂದಿಲ್ಲ. ಆ ವಿಚಾರ ಬಂದಾಗ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ.