ಬೆಂಗಳೂರು: ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಮೇಯರ್ ಇಂದು ತಪಾಸಣೆ ನಡೆಸಿದರು.
ನಗರದ ರಿಚ್ಮಂಡ್ ಸರ್ಕಲ್‍ನ ಜಂಕ್ಷನ್‍ನಲ್ಲಿ ಮೇಯರ್ ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಫುಟ್‍ಪಾತ್, ರೋಡ್ ಕಟಿಂಗ್, ರಸ್ತೆ ಗುಂಡಿ ಸಮಸ್ಯೆ, ಡಾಂಬರೀಕರಣ ಅವ್ಯವಸ್ಥೆ, ರಸ್ತೆ ಹಾಳಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಯಿತು.
Advertisement
Advertisement
ಮೇಯರ್ ತಪಾಸಣೆ ವೇಳೆ ಚರಂಡಿ ನೀರು ರಸ್ತೆಗೆ ಹರಿದು ಹೋಗುತ್ತಿತ್ತು. ಇದೇ ವೇಳೆ ಇಡೀ ರಿಚ್ಮಂಡ್ ಫ್ಲೈಓವರ್ ಓಎಫ್‍ಸಿ(ಆಪ್ಟಿಕಲ್ ಫೈಬರ್ ಕೇಬಲ್) ಎಲ್ಲೆಂದರಲ್ಲಿ ನೇತಾಡುತ್ತಿತ್ತು. ಈ ದೃಶ್ಯ ನೋಡಿದ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು.
Advertisement
ಬಳಿಕ ಸ್ವತಃ ಮೇಯರ್ ಗೌತಮ್ ಅವರು ರಸ್ತೆ ಮಧ್ಯೆ ಭಾಗಕ್ಕೆ ತೂಗಾಡುತ್ತಿದ್ದ ಓಎಫ್‍ಸಿ ಕೇಬಲ್ ಕಟ್ ಮಾಡಿದರು. ಈ ವೇಳೆ ಸ್ಥಳೀಯ ಜಂಟಿ ಆಯುಕ್ತ ಪಲ್ಲವಿ ಹಾಗೂ ಬಹುತೇಕ ನಾಯಕರು ಹಾಜರಿದ್ದರು.
Advertisement
ಇದೇ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಇದು ಎಲ್ಲ ಅಕ್ರಮ ಓಎಫ್‍ಸಿ ಕೇಬಲ್‍ಗೆ ಎಚ್ಚರಿಕೆ. ಕೂಡಲೇ ರೋಡ್ ಚೆಂದವನ್ನು ಕೆಡಿಸುವ ಕೆಲಸ ನಿಲ್ಲಿಸಬೇಕಿದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಭಾಗಕ್ಕೂ ನಾನು ಪರಿಶೀಲನೆ ಮಾಡುವೆ. ಆಗ ಈ ತಪ್ಪು ಕಂಡು ಬಂದರೆ ನೇರ ಕೇಬಲ್ ಕಟ್ ಮಾಡಲಾಗುತ್ತದೆ ಎಂದರು.