ಬೆಂಗಳೂರು : ನಗರದ ಎಂಜಿ ರಸ್ತೆಯ ಉದ್ಯಾನವನದಲ್ಲಿರುವ ಗಾಂಧೀಜಿ ಪ್ರತಿಮೆ ಮುಂದೆ ಓಪನ್ ಆಗಿರುವ ಏಷ್ಯಾದ ಅತಿದೊಡ್ಡ ಟಾನಿಕ್ ಮದ್ಯ ಮಳಿಗೆಗೆ ಎಲ್ಲೆಲ್ಲದ ವಿರೋಧ ವ್ಯಕ್ತವಾಗ್ತಿದೆ. ಸಾಮಾಜಿಕ ಕಾರ್ಯಕರ್ತರು, ಚಿಂತಕರು ಎಲ್ಲರೂ ಕೂಡ ಮಳಿಗೆ ಓಪನ್ ಮಾಡಲು ನೀಡಿರುವ ಪರವಾನಗಿ ಪ್ರಶ್ನಿಸಿ ದೂರುಗಳು ಸುರಿಮಳೆ ಬಿಬಿಎಂಪಿಗೆ ನೀಡುತ್ತಿದ್ದಾರೆ. ಇದೀಗ ಮೇಯರ್ ಗೌತಮ್ ಕುಮಾರ್ ಅವರ ಟ್ವೀಟ್ ಮೂಲಕ ವಿವಾದಿತ ಮದ್ಯದ ಮಳಿಗೆಯ ಬೆಂಬಲಿಸಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
Advertisement
ಗಾಂಧಿ ಪ್ರತಿಮೆ ಮುಂದೆ ಮದ್ಯ ಮಳಿಗೆ ಓಪನ್ ಮಾಡಲು ನೀಡಿರುವ ಪರವಾನಗಿ ರದ್ದು ಕೋರಿ ಹೈಕೋರ್ಟ್ ವಕೀಲ ಎಂ.ವಿ ಅಮರನಾಥನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ಅರ್ಜಿಯನ್ನು ನ್ಯಾಯಾಮೂರ್ತಿ ರವಿ ಮಳಿಮಠ ಮತ್ತು ನ್ಯಾಯ ಮೂರ್ತಿ ಎಂ ನಾಗಪ್ರಸನ್ನ ಅವರ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
Advertisement
ಪ್ರಕರಣದ ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾ ಅಬಕಾರಿ ಆಯುಕ್ತರು, ಬಾರ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೆ ವಿವಾದಾತ್ಮಕ ಮದ್ಯ ಮಳಿಗೆಯ ಫೋಟೋವನ್ನ ಮೇಯರ್ ಗೌತಮ್ ಕುಮಾರ್ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಟಾನಿಕ್ ಮದ್ಯಮಳಿಗೆಯ ಫೋಟೋ ಹಾಕಿಕೊಂಡು ಬೆಂಗಳೂರಿನಲ್ಲಿ ಇರುವ ಎಲ್ಲಾ ಉದ್ದಿಮೆಗಳ ನಾಮಫಲಕಗಳು ಕನ್ನಡದಲ್ಲೆ ಇರಲಿ ಅಂತಾ ಟ್ವಿಟ್ಟರ್ ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement
ಬೆಂಗಳೂರು ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕಾಗಿ, ಬಿಬಿಎಂಪಿಯು ಎಲ್ಲಾ ಉದ್ದಿಮೆ/ಮಳಿಗೆಗಳಿಗೆ ನೋಟಿಸ್ ಮೂಲಕ ಸೂಚನೆ ನೀಡುತಿದೆ. pic.twitter.com/W7ePqXmlop
— Rakesh Singh IAS (@BBMPAdmn) December 14, 2019
Advertisement
ಕನ್ನಡದಲ್ಲಿ ನಾಮಫಲಕ ಹಾಕಿ ಅಂತಾ ಆದೇಶ ಪಾಲಿಸಿದ್ದಕ್ಕೆ ಮೇಯರ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಮದ್ಯ ಮಳಿಗೆಯ ಪರವಾನಗಿ ರದ್ದುಗೊಳಿಸಿ ಅಂತಾ ಬಿಬಿಎಂಪಿಗೆ ಸಾಕಷ್ಟು ದೂರುಗಳನ್ನ ನೀಡಿದ್ದಾರೆ. ದೂರುಗಳನ್ನ ಪರಿಗಣಿಸಿದೇ ಟ್ವಿಟ್ಟರ್ ನಲ್ಲಿ ಟಾನಿಕ್ ಮದ್ಯ ಮಳಿಗೆ ಫೋಟೋ ಹಾಕಿಕೊಂಡಿರುವುದು ಬೆಂಬಲ ವ್ಯಕ್ತಪಡಿಸಿದರಾ ಅಂತಾ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.