ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರೇ ಎಚ್ಚರ. ಇಷ್ಟು ದಿನ ಬೆಂಗಳೂರು (Bengaluru) ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಟೋಯಿಂಗ್ (Towing) ಅನ್ನು ಮತ್ತೆ ಶುರು ಮಾಡೋ ಪ್ಲಾನ್ ನಡೆಯುತ್ತಿದೆ. ಆದರೆ ಇನ್ಮುಂದೆ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಟ್ರಾಫಿಕ್ ಪೊಲೀಸರ ಬದಲು ಬಿಬಿಎಂಪಿ (BBMP) ಮಾಡ್ತಿದೆ.
Advertisement
ಕಳೆದ ಆರೇಳು ತಿಂಗಳ ಹಿಂದೆ ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಜನಕ್ರೋಶ ವ್ಯಕ್ತವಾಗಿತ್ತು. ಕರುಣೇ ಇಲ್ಲದ ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿಯಾಗಿ ಟೋಯಿಂಗ್ ಮಾಡ್ತಾರೆ, ಗಾಡಿ ಡ್ಯಾಮೇಜ್ ಆಗುತ್ತೆ, ಜನರ ಜೊತೆ ಟೋಯಿಂಗ್ ಮಾಡೋ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ದರ್ಪದಿಂದ ನಡೆದುಕೊಳ್ಳುತ್ತಾರೆ ಅಂತಾ ಜನ ಟ್ರಾಫಿಕ್ ಪೊಲೀಸರ ವಿರುದ್ಧ ಮತ್ತು ಟೋಯಿಂಗ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಲವು ಕಡೆ ಗಲಾಟೆಗಳು ಆಗಿತ್ತು. ಇದರಿಂದ ಸರ್ಕಾರ ಮತ್ತು ಟ್ರಾಫಿಕ್ ಪೊಲೀಸ್ ಇಲಾಖೆ ಟೋಯಿಂಗ್ ವ್ಯವಸ್ಥೆಯನ್ನು ಪೊಲೀಸರು ಕೈಬಿಡುವಂತೆ ಮಾಡಿತ್ತು. ಇದನ್ನೂ ಓದಿ: ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು
Advertisement
Advertisement
Advertisement
ಇದೀಗ ಮತ್ತೆ ಟೋಯಿಂಗ್ ಸದ್ದು ಕೇಳಿ ಬರ್ತಿದೆ. ಆದರೆ ಈ ಬಾರಿ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಬಿಬಿಎಂಪಿಯದ್ದು. ಪೊಲೀಸರು ಖುದ್ದು ಇದ್ದು ಖಾಸಗಿಯವರ ಸಹಯೋಗದೊಂದಿಗೆ ಟೋಯಿಂಗ್ ಮಾಡುವಾಗಲೇ ಜನ ಆಕ್ರೋಶ ವ್ಯಕ್ತಪಡಿಸ್ತಿದ್ರು. ಈಗ ಬಿಬಿಎಂಪಿ ಸಂಪೂರ್ಣವಾಗಿ ಖಾಸಗಿ ಎಜೆನ್ಸಿ ಮೂಲಕ ಟೋಯಿಂಗ್ ಮಾಡಿಸಲು ಮುಂದಾಗಿದೆ. ಇದಕ್ಕೆ ಜನ ತೀವ್ರವಾಗಿ ಆಕ್ರೋಶ ಹೊರ ಹಾಕ್ತಿದ್ದಾರೆ. ಇದು ಬಿಬಿಎಂಪಿಯ ಹಣ ಮಾಡೋ ಯೋಜನೆ, ಜನರಿಗೆ ಅದರಲ್ಲೂ ವಾಹನ ಸವಾರರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಅಂತಾ ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: ರುಚಿಕರ ಬೆಂಡೆಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ
ಸ್ಮಾರ್ಟ್ ಪಾರ್ಕಿಂಗ್‍ಗೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದು, ಸ್ಮಾರ್ಟ್ ಪಾರ್ಕಿಂಗ್ ಹೆಸರಲ್ಲಿ ಬಿಬಿಎಂಪಿ ಹಗಲು ದರೋಡೆ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಇದೀಗ ಸ್ಮಾರ್ಟ್ ಪಾರ್ಕಿಂಗ್ ಎಲ್ಲಾ ಕಡೆ ಸರಿಯಾಗಿ ಜಾರಿಗೆ ಬಂದಿಲ್ಲ. ಹೀಗಿರುವಾಗ ಟೋಯಿಂಗ್ ಬೇರೆ ಮಾಡೋ ಪ್ಲಾನ್ ಬೇಕಿತ್ತಾ ಅಂತ ಬೆಂಗಳೂರಿಗರು ಪಾಲಿಕೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.