ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಕೊಡಬೇಕಿದ್ದ ನೂರಾರು ಕೋಟಿ ರೂಪಾಯಿ GST ಹಣ ಬಿ.ಬಿ.ಎಂ.ಪಿ.ಯಲ್ಲಿ ವಂಚಿಸಿರುವ ಬೃಹತ್ ಹಗರಣ ಮತ್ತು ಜಿ.ಎಸ್.ಟಿ.ನಿರ್ವಹಣೆಯಲ್ಲಿ ವಿಫಲರಾಗಿರುವುದರ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಬಿ. ಹೆಚ್. ವೀರೇಶ್ ಮಾಹಿತಿ ನೀಡಿದ್ದಾರೆ.
Advertisement
ಮಹಾನಗರ ಪಾಲಿಕೆಯಲ್ಲಿ ಜಿ.ಎಸ್.ಟಿ. ಕಾನೂನಿನ ಅಸಮರ್ಪಕ ಅನುಷ್ಠಾನದಿಂದ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಡೆಯುವ ಬಗ್ಗೆ. ಮಹಾನಗರ ಪಾಲಿಕೆ ಹೊರಡಿಸಿರುವ ಸುತ್ತೋಲೆ ನಂ. ಮುಲೆಪ ಪಿ.ಆರ್./ಜಿ.ಎಸ್.ಟಿ.-01/17-18, 2017ರ ಜೂನ್ 21ರಂದು ಸೂಚಿಸಿರುವಂತೆ ಬಿಲ್‍ಗಳನ್ನು ಪಾವತಿಸುವಾಗ ಈ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ. 2017ರ ಜುಲೈ 1ರ ನಂತರ ಅನ್ವಯವಾಗುವಂತೆ ನಿರ್ವಹಿಸುವ ಕಾಮಗಾರಿಗಳಿಗೆ/ಸರಬರಾಜುಗಳಿಗೆ ಗುತ್ತಿಗೆದಾರರಿಂದ ಕಾಯಿದೆಯಲ್ಲಿ ನಿಗದಿಪಡಿಸಿರುವ ಮಾನದಂಡದಂತೆ Invoice (ಬಿಲ್)ನ್ನು ನೀಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ/ಸರಬರಾಜುದಾರರಿಗೆ ಸೂಚಿಸಬೇಕಾಗಿದೆ. ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ C. C. Bill ಜೊತೆಯಲ್ಲಿ ಕಾಯಿದೆಯಲ್ಲಿ ನಿಗದಿ ಪಡಿಸಿರುವ ಕ್ರಮಾಂಕಿತ ಗುತ್ತಿಗೆದಾರರ Invoice (ಬಿಲ್)ನ್ನು ಗುತ್ತಿಗೆದಾರರಿಂದ ಪಡೆಯಬೇಕು. ಸದರಿ Invoice (ಬಿಲ್)ನಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ 2 (work done cost + CGST + SGST = Bill Amount). ಕಾಮಗಾರಿಗಳಿಗೆ ಮುಂಗಡ ಹಣ ಪಾವತಿಸುವ ಸಂದರ್ಭದಲ್ಲೂ ಸಹ ಮೇಲಿನಂತೆ ಕ್ರಮವಹಿಸಬೇಕಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಪಿಯುಸಿ ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಗಿಫ್ಟ್ – ಗೌರವಧನ ಹೆಚ್ಚಳ
Advertisement
ಆದರೆ ಪಾಲಿಕೆಯಲ್ಲಿ ಬಿಲ್ ಪಾವತಿಸುವಾಗ ಯಾವ ಬಿಲ್‍ಗಳಲ್ಲೂ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ, CGST ಮತ್ತು SGSh ಪ್ರತ್ಯೇಕವಾಗಿ ವಿಂಗಡಿಸಿ ನೀಡುತ್ತಿಲ್ಲ. GST Invoice ಗಳನ್ನು ಸಹ ಸಲ್ಲಿಸುತ್ತಿಲ್ಲ ಇವುಗಳನ್ನು Integrated Finance Management ನಲ್ಲೂ ಅಪ್ ಲೋಡ್ ಮಾಡುತ್ತಿಲ್ಲ. ಇದರಿಂದ ಪಾಲಿಕೆಯು ಅನಾವಶ್ಯಕವಾಗಿ ಹೆಚ್ಚಿನ ತೆರಿಗೆ ನೀಡಬೇಕಾದ ಸಂಧರ್ಭ ಒದಗಿದೆ. ಇದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ಕಬ್ಬಿಣ, ಸಿಮೆಂಟ್, ಕಾಂಕ್ರೀಟ್, ಮರಳು, ಜಲ್ಲಿ, ಬಿಟುಮಿನ್ ಮುಂತಾದ ವಿವರಗಳು ಮತ್ತು ಅವುಗಳಿಗೆ ಸಂದಾಯವಾದ ಜಿ.ಎಸ್.ಟಿ. ತೆರಿಗೆಯ ವಿವರ ಲಭ್ಯವಾಗುವುದಿಲ್ಲ. GST Invoice ಗಳನ್ನು ಸಲ್ಲಿಸುವುದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ವಸ್ತುಗಳ ವಿವರದ ಸಹಾಯದಿಂದ ಕಾಮಗಾರಿಯ ಗುಣಮಟ್ಟವನ್ನು ಅಳೆಯಬಹುದಾಗಿರುತ್ತದೆ. ಇದು ಕಾಮಗಾರಿ ನಡೆಸದೆ ಭೋಗಸ್ ಬಿಲ್‍ಗಳನ್ನು ನೀಡಿ ಹಣ ಲಪಟಾಯಿಸುತ್ತಿರುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. GST Invoice ಗಳನ್ನು ಸಲ್ಲಿಸದಿರುವ ಮತ್ತು ಇವುಗಳನ್ನು Integrated Finance Management Je ಅಪ್ ಲೋಡ್ ಮಾಡದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಂತಹ ಬಿಲ್‍ಗಳನ್ನು ಪಾವತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.
Advertisement
Advertisement
ಇದಲ್ಲದೆ 2022ರ ಜನವರಿ 1ರ ನಂತರ ಸಲ್ಲಿಸಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್‍ಗಳ ಮೇಲೆ ಶೇಕಡಾ 12ರ ಬದಲಾಗಿ ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿಸಬೇಕಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವನ್ನು ಗುತ್ತಿಗೆದಾರರ ಜೊತೆ ಮಾಡಿಕೊಳ್ಳುವುದರಲ್ಲಿ ಪಾಲಿಕೆಯು ವಿಫಲವಾಗಿರುವುದರಿಂದ ಹೆಚ್ಚುವರಿ ಹೊರೆಯನ್ನು ಪಾಲಿಕೆಯೇ ಹೊರಬೇಕಾಗಿದೆ. ಇದರಿಂದ ಪಾಲಿಕೆಗೆ ಅನಾವಶ್ಯಕ ಆರ್ಥಿಕ ಹೊರೆ ಉಂಟಾಗಲಿದೆ. ಇದರಂತೆ 2022ರ ಜನವರಿ 1ರ ನಂತರ ಸಲ್ಲಿಸುವ ಬಿಲ್‍ಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಶೇಕಡಾ ಆರರಂತೆ ಸಂದಾಯಮಾಡಬೇಕಾದ ತೆರಿಗೆ ಹಣವನ್ನು ಕಾಮಗಾರಿಯು ಗುತ್ತಿಗೆದಾರಿಂದ ವಿಳಂಬವಾಗಿದ್ದರೆ, ಅಂತಹ ಸಂದರ್ಭದಲ್ಲಿ ಗುತ್ತಿಗೆದಾರರಿಂದಲೇ ವಸೂಲು ಮಾಡಬೇಕಾಗಿರುತ್ತದೆ. ಇದರಿಂದ ಪಾಲಿಕೆಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಡೆಯಬಹುದಾಗಿರುತ್ತದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸಿ ಕಾಮಗಾರಿಯ ವಿಳಂಬವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿದ್ದರೆ ಅವರಿಂದ ವಸೂಲು ಮಾಡುವಂತೆಯೂ ಮತ್ತು ವಿಳಂಬವು ಗುತ್ತಿಗೆದಾರರಿಂದ ಉಂಟಾಗಿದ್ದಲ್ಲಿ ಗುತ್ತಿಗೆದಾರರಿಂದಲೇ ವಸೂಲು ಮಾಡುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ
ಕರ್ನಾಟಕ ಗೂಡ್ಸ್ ಮತ್ತು ಸರ್ವೀಸಸ್ ಕಾಯಿದೆಯ ಸೆಕ್ಷನ್ 14ರ ಅನ್ವಯ ಗುತ್ತಿಗೆದಾರರು 2022ರ ಜನವರಿ 1ರ ಮುಂಚೆ ಸಲ್ಲಿಸಿರುವ ಬಿಲ್ ಗಳಿಗೆ ಟ್ರ್ಯಾಕ್ ಇನ್ ವಾಯ್ ಸಲ್ಲಿಸದೇ ಇರುವುದರಿಂದ ಪಾವತಿಗೆ ಬಾಕಿ ಉಳಿದಿರುವ ಎಲ್ಲ ಬಿಲ್‍ಗಳ ಮೇಲೆ ಶೇಕಡಾ 18 ರಷ್ಟು ತೆರಿಗೆಯನ್ನು ಅಂದರೆ ಶೇಕಡಾ 6 ರಷ್ಟು ಹೆಚ್ಚುವರಿ ತೆರಿಗೆಯನ್ನು ಕಟ್ಟಬೇಕಾಗಿರುತ್ತದೆ. ಇದುವರೆಗೂ ಸುಮಾರು ಎರಡು ಸಾವಿರ ಕೋಟಿರೂಗಳಿಗೂ ಹೆಚ್ಚಿನ ಬಾಕಿ ಉಳಿದಿರುವ ಬಿಲ್‍ಗಳಿಂದ ಸುಮಾರು 120 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆಯನ್ನು ಸಲ್ಲಿಸಬೇಕಾಗಿರುತ್ತದೆ. ಗುತ್ತಿಗೆದಾರರು ಈ ತೆರಿಗೆಯನ್ನು ಕಟ್ಟದಿದ್ದಲ್ಲಿ ಇದರ ಜವಾಬ್ದಾರಿ ಪಾಲಿಕೆಯದಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಗುತ್ತಿಗೆದಾರರು ಬಿಲ್‍ಗಳನ್ನು ಸಲ್ಲಿಸುವಾಗ ಅದರ ಜೊತೆಯಲ್ಲಿ GST Tax Invoice ಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಮತ್ತು ಎಲ್ಲ ಬಿಲ್ ಗಳಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ (work done cost + CGST + SGST = Bill Amount). ಕಡ್ಡಾಯವಾಗಿ ನೀಡುವಂತೆ ಆದೇಶಿಸಬೇಕು. ಈ ಕಾನೂನಿನ ದುರ್ಬಳಕೆ ಮಾಡಿ ಸರ್ಕಾರಕ್ಕೆ ಸಲ್ಲಬೇಕಾದ ತೆರಿಗೆಯನ್ನು ವಂಚಿಸುತ್ತಿರುವ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಬೇಕಾಗಿದೆ. ಆದುದರಿಂದ ಇನ್ನು ಮುಂದೆ ಹಣವನ್ನು ಪಾವತಿಮಾಡುವ ಮೊದಲು ಸುತ್ತೋಲೆಯಲ್ಲಿ ಸೂಚಿಸಿರುವ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.