ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ ಚಾಲಕ ಚಿಕಿತ್ಸೆ ಫಲಿಸದೇ ಸಾವು

Public TV
1 Min Read
BBMP Lorry Driver

– ಅಪಘಾತದಲ್ಲಿ 10 ವರ್ಷದ ಬಾಲಕ ಸಾವು ಹಿನ್ನೆಲೆ ಚಾಲಕನಿಗೆ ಥಳಿಸಿದ್ದ ಉದ್ರಿಕ್ತರ ಗುಂಪು

ಬೆಂಗಳೂರು: ಅಪಘಾತದಲ್ಲಿ ಬಾಲಕ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪಿನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ (BBMP Lorry) ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಲಾರಿ ಚಾಲಕನಾಗಿದ್ದ 55 ವರ್ಷದ ಕೊಂಡಯ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

BBMP Truck 2

ನಗರದ ಥಣಿಸಂಧ್ರದ ಹೆಗಡೆ ನಗರದ ಬಳಿ ಬಿಬಿಎಂಪಿ ಲಾರಿಯಿಂದ ಅಪಘಾತವಾಗಿತ್ತು. ಲಾರಿ ಗುದ್ದಿದ ಪರಿಣಾಮ ಬೈಕ್‌ನಲ್ಲಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.

ಅಪಘಾತ ಆದ ಪರಿಣಾಮ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅಲ್ಲದೇ, ಲಾರಿ ಚಾಲಕನಿಗೆ ಮನಸೋ ಇಚ್ಛೆ ಥಳಿಸಿತ್ತು. ಹಲ್ಲೆ ಆದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಗಂಭೀರ ಸ್ಥಿತಿ ತಲುಪಿ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಹೊಸಪೇಟೆ | ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ

ಬಿಬಿಎಂಪಿ ಕಸದ ಲಾರಿ ಚಾಲಕನಿಗೆ ಥಳಿಸಿದ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಿ ಸಂಪಿಗೆಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

Share This Article