– ಗ್ರಾಮವನ್ನ ಗಬ್ಬೆಬ್ಬಿಸಿರುವ ಬಿಬಿಎಂಪಿ ವಿರುದ್ಧ ಆಕ್ರೋಶ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದ್ದು, ಕಸ ಹಾಕಲು ಜಾಗವಿಲ್ಲದೆ ನಗರದ ಹೊರವಲಯದ ಜಮೀನೊಂದರಲ್ಲಿ ಬಿಬಿಎಂಪಿ ಕಸದ ಲಾರಿಗಳು ಡಂಪಿಂಗ್ ಮಾಡಿ ಗ್ರಾಮವೊಂದು ಗಬ್ಬು ನಾರುವಂತೆ ಮಾಡಿಬಿಟ್ಟಿದೆ.
Advertisement
ರಾತ್ರೋರಾತ್ರಿ ರಸ್ತೆಗಳಲ್ಲಿ, ಬೆಂಗಳೂರು ಸುತ್ತಮುತ್ತಲ ಗ್ರಾಮದ ಜಮೀನುಗಳಲ್ಲಿ ಕಸ ಸುರಿದು ಬಿಬಿಎಂಪಿ ಕಸದ ಲಾರಿಗಳು ಹೋಗುತ್ತಿದೆ. ಹೀಗೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಮೈಲ್ ಸಂದ್ರ ಗ್ರಾಮದಲ್ಲಿ ಬಿಬಿಎಂಪಿ ಕಸದ ಲಾರಿಗಳು ಕಸ ಡಂಪಿಂಗ್ ಮಾಡಿ ಇಡೀ ಗ್ರಾಮವನ್ನೇ ಗಬ್ಬು ನಾರುವಂತೆ ಮಾಡಿದೆ. ಬಿಬಿಎಂಪಿ ಇಲ್ಲಿ ಕಸ ಡಂಪಿಂಗ್ ಮಾಡಲು ಯಾವುದೇ ಒಪ್ಪಿಗೆ ಪಡೆದಿಲ್ಲ. ಆದರೂ ಕೂಡ ರಾತ್ರೋರಾತ್ರಿ ಅಥವಾ ಬೆಳಗಿನ ಜಾವ ಬಿಬಿಎಂಪಿ ಕಸದ ಲಾರಿಗಳು ಮೈಲ್ ಸಂದ್ರದಲ್ಲಿ ಕಸ ಡಂಪಿಂಗ್ ಮಾಡಿ ಹೋಗುತ್ತಿದೆ.
Advertisement
Advertisement
ಹೀಗೆ ಬೆಳಗಿನ ಜಾವ 3ಗಂಟೆ ಸುಮಾರಿಗೆ ಬಿಬಿಎಂಪಿ ಲಾರಿಗಳ ಚಾಲಕರು ಮೈಲ್ ಸಂದ್ರ ನಿವಾಸಿ ಪಾಪರಾಜು ಜಮೀನಿನಲ್ಲಿ ಕಸ ಡಂಪಿಂಗ್ ಮಾಡುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕೆಲ ಚಾಲಕರು ಲಾರಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಊರಿನಲ್ಲಿ ಕಸ ಸುರಿದ ಕಾರಣಕ್ಕೆ ಗ್ರಾಮದ ಸುತ್ತಮುತ್ತ ಗಬ್ಬು ನಾರುತ್ತಿದೆ. ಹೀಗೆ ಬಿಬಿಎಂಪಿ ಬೇಕಾಬಿಟ್ಟಿ ಕಂಡಕಂಡಲ್ಲಿ ಕಸ ಸುರಿಯುವುದು ತಪ್ಪು ಎಂದು ಗ್ರಾಮಸ್ಥರು ಆಕ್ರೋಕ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಅಧಿಕಾರಿಗಳಿಗೆ ಗ್ರಾಮಸ್ಥರು ಶಾಪ ಹಾಕುತ್ತಿದ್ದಾರೆ.