ಬೆಂಗಳೂರು: ಅನಧಿಕೃತ ನಿರ್ಮಾಣ ಹಂತದ ಕಟ್ಟಡಗಳ ಬಗ್ಗೆ ಕೊನೆಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಅಂತಹ ಕಟ್ಟಡಗಳ ವಿರುದ್ಧ ಸಮರ ಸಾರುವ ಮೂಲಕ ತೆರವು ಸಂಬಂಧ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿದೆ.
ಬಾಬುಸಾಪಾಳ್ಯ ನಿರ್ಮಾಣ ಹಂತದ ಕಟ್ಟಡ ದುರಂತ ಇಡಿ ಬೆಂಗಳೂರನ್ನ ಬೆಚ್ಚಿ ಬೀಳಿಸಿತ್ತು. 9 ಕಾರ್ಮಿಕರು ತಮ್ಮ ಘಟನೆಯಲ್ಲಿ ಪ್ರಾಣ ಕಳೆದಕೊಂಡಿದ್ದರು. ಆದಾದ ಬಳಿಕ ನಗರದ ಅನಧಿಕೃತ ಕಟ್ಟಡಗಳ ಸರ್ವೇಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಆದೇಶ ನೀಡಿದ ಬಳಿಕ ಅಲರ್ಟ್ ಆಗಿದ್ದ ಬಿಬಿಎಂಪಿ, ನಗರದಲ್ಲಿ 2 ಸಾವಿರ ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳಿರುವ ಬಗ್ಗೆ ಸರ್ವೇ ಮಾಡಿದೆ. ಅವುಗಳ ತೆರವು ಸಂಬಂಧ ಪ್ರಕ್ರಿಯೆ ಕೂಡ ಆರಂಭಿಸಿದೆ.
Advertisement
ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯ ಅನಧಿಕೃತ ಕಟ್ಟಡಗಳ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಹದೇವಪುರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ 400ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲು ಆದೇಶಿ ಹೊರಡಿಸಿದೆ. ನವೆಂಬರ್ 28 ರಿಂದ ಬಿಬಿಎಂಪಿ ಅಧಿಕೃತವಾಗಿ ಅನಧಿಕೃತ ಕಟ್ಟಡಗಳ ಸರ್ವೇ ಆರಂಭಿಸಿತು. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳನ್ನು ಪತ್ತೆಹಚ್ಚಲಾಗಿದೆ. ಮಹದೇವಪುರ ವಲಯದಲ್ಲಿ ಅತ್ಯಧಿಕ ಅನಧಿಕೃತ ಕಟ್ಟಡಗಳು ಕಂಡುಬಂದಿದ್ದು, ಈಗ ನೋಟಿಸ್ ಜಾರಿ ಮಾಡಿ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮಹದೇವಪುರ ಉಪ ವಿಭಾಗದ ವ್ಯಾಪ್ತಿಯ 285 ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಕೆ.ಆರ್. ಪುರ ಉಪ ವಿಭಾಗದ 112 ಕಟ್ಟಡಗಳಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ. ಮಹದೇವಪುರ ವಲಯದ ಮುಖ್ಯ ಎಂಜಿನಿಯರ್ ಲೋಕೇಶ್ ಅವರ ಪ್ರಕಾರ, ಇವುಗಳ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗಿರುವುದರಿಂದ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ.
Advertisement
ನೋಟಿಸ್ ನೀಡಿದ ಕಟ್ಟಡಗಳಿಗೆ ಬ್ಯಾನರ್ ಹಾಕುವ ಮೂಲಕ ಅಧಿಕೃತವಾಗಿ ಇದು ಅನಧಿಕೃತ ಕಟ್ಟಡ ಅಂತ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನ ಮಾಡಿದೆ ಬಿಬಿಎಂಪಿ. ಅಲ್ಲದೆ ಈ ಕಟ್ಟಡಗಳನ್ನ ಒಂದು ವಾರದೊಳಗೆ ತೆರವು ಮಾಡುವಂತೆ ಆ ಕಟ್ಟಡದ ಮಾಲೀಕರಿಗೂ ಎಚ್ಚರಿಕೆ ನೀಡಲಾಗಿದೆ. ಒಂದೊಮ್ಮೆ ಮಾಲೀಕರು 7 ದಿನಗಳ ಒಳಗೆ ಈ ಕಟ್ಟಡ ತೆರವು ಕಾರ್ಯ ಆಗದಿದ್ದರೆ, ಖುದ್ದು ಬಿಬಿಎಂಪಿ ತೆರವು ಮಾಡುವುದರ ಜೊತೆಗೆ ಕಠಿಣ ಕ್ರಮದ ಎಚ್ಚರಿಕೆ ಕೂಡ ನೀಡಿದೆ.