ಬೆಂಗಳೂರು: ನಗರದಲ್ಲಿ ಬಯಲು ಮೂತ್ರ ವಿಸರ್ಜನೆಗೆ ಹೇಗಾದರೂ ಮಾಡಿ ಕಡಿವಾಣ ಹಾಕಲೇಬೇಕೆಂದು ನಿರ್ಧರಿಸಿರುವ ಬಿಬಿಎಂಪಿ ಹೊಸ ತಂತ್ರಕ್ಕೆ ಮೊರೆ ಹೋಗಿದ್ದು, ಬಯಲು ಮೂತ್ರ ಮಾಡುವ ಸ್ಥಳದಲ್ಲಿ ಕನ್ನಡಿಯನ್ನು ಅಳವಡಿಸುತ್ತಿದೆ.
ಸ್ವಚ್ಛ ಸರ್ವೇಕ್ಷಣ-2020 ಕ್ಯಾಂಪೇನ್ ಭಾಗವಾಗಿ, ಸಾರ್ವಜನಿಕರು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವ ಪ್ರದೇಶಗಳಲ್ಲೇ ಬಿಬಿಎಂಪಿ ಕನ್ನಡಿಗಳನ್ನು ಅಳವಡಿಸುತ್ತಿದೆ. ನಗರದ ಸುಮಾರು 5 ಸ್ಥಳಗಳಾದ ಕೆ.ಆರ್.ಮಾರ್ಕೆಟ್, ಇಎಸ್‍ಐ ಆಸ್ಪತ್ರೆ ಇಂದಿರಾನಗರ, ಕೊಕೊನೆಟ್ ಗ್ರೋವ್ ಚರ್ಚ್ ಸ್ಟ್ರೀಟ್, ಜ್ಯೋತಿ ನಿವಾಸ ಕಾಲೇಜು ಕೋರಮಂಗಲ, ಕ್ವೀನ್ಸ್ ಸರ್ಕಲ್ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ 8*4 ಅಡಿ ಗಾತ್ರದ ಬೃಹತ್ ಕನ್ನಡಿಗಳನ್ನು ಹಾಕಲಾಗಿದೆ.
Advertisement
Advertisement
ಕನ್ನಡಿಗೆ ಸುಮಾರು 50 ಸಾವಿರ ರೂ. ವ್ಯಯಿಸುತ್ತಿರುವ ಬಿಬಿಎಂಪಿ, ಈ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಕೂಡ ಅಳವಡಿಸುತ್ತಿದೆ. ಆ ಮೂಲಕ ಮೂತ್ರ ವಿಸರ್ಜನೆ ಮಾಡುವವರ ಗುರುತು ಪತ್ತೆ ಮಾಡಿ ಶಿಕ್ಷೆ ನೀಡಲು ಸಿದ್ಧತೆ ನಡೆಸಿದೆ. 2019ರಲ್ಲಿ ಬಯಲು ಮೂತ್ರ ಮಾಡಿರುವ 100 ಜನರಿಗೆ ದಂಡ ವಿಧಿಸಲಾಗಿದೆ.
Advertisement
ವಿಶೇಷತೆಗಳೇನು?
ಕನ್ನಡಿಯ ವಿಶೇಷ ಎಂದರೇ, ಇದರಿಂದ ಬಯಲು ಮೂತ್ರ ವಿಸರ್ಜನೆ ತಡೆಯುವುದು ಮಾತ್ರವಲ್ಲದೇ, ಅದರಲ್ಲಿ ಬಿಬಿಎಂಪಿ ಲೋಗೋ ಮತ್ತು ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದಾಗ ಅಲ್ಲೇ ಹತ್ತಿರದಲ್ಲಿರುವ ಶೌಚಾಲಯವನ್ನು ತೋರಿಸುತ್ತದೆ. ಸದ್ಯ ಬಿಬಿಎಂಪಿ 419 ರೆಗ್ಯುಲರ್ ಸಾರ್ವಜನಿಕ ಶೌಚಾಲಯಗಳನ್ನು ಹೊಂದಿದ್ದು, 162 ಇ-ಟಾಯ್ಲೆಂಟ್ ಗಳನ್ನು ಹೊಂದಿದೆ. ಅಲ್ಲದೇ ಕನ್ನಡಿಯ ಮೇಲೆ ಕಸದ ಬುಟ್ಟಿ ಬಳಕೆ ಮಾಡುವ, ಒಮ್ಮೆ ಬಳಸಿ ಬೀಸಾಡುವ ಪ್ಲಾಸ್ಟಿಕ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಬೇಡ ಎಂಬ ಬಗ್ಗೆಯೂ ಅರಿವು ಮೂಡಿಸುವ ಸಂದೇಶಗಳನ್ನು ಬಳಕೆ ಮಾಡಲಾಗಿದೆ.