ಬೆಂಗಳೂರು: ದುಬಾರಿ ಕಾರು ಬೇಡಿಕೆ ಬೆನ್ನಲ್ಲೇ ಸಾರ್ವಜನಿಕರನ್ನು ಭೇಟಿ ಮಾಡಲು ಪ್ರತ್ಯೇಕ ನಿವಾಸ ಬೇಕು ಅಂತಾ ಬಿಬಿಎಂಪಿ ಅಧ್ಯಕ್ಷರು ಬೇಡಿಕೆ ಇಟ್ಟಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದುಂದುವೆಚ್ಚ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ ಇತ್ತ ಬಿಬಿಎಂಪಿ ಅಧ್ಯಕ್ಷರು ತಮ್ಮ ದುಬಾರಿ ವೆಚ್ಚದ ಪಟ್ಟಿಯನ್ನು ಹೆಚ್ಚಿಸುತ್ತಿದ್ದಾರೆ. ಸಚಿವರಿಗೆ ಸಿಗುವ ಸವಲತ್ತುಗಳು ನಮಗೂ ಸಿಗಬೇಕೆಂದು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರು ನಿನ್ನೆಯಷ್ಟೇ ದುಬಾರಿ ವೆಚ್ಚದ ಕಾರಿನ ಬೇಡಿಕೆ ಇಟ್ಟಿದ್ದರು. ಈಗ ಮೇಯರ್, ಉಪ ಮೇಯರ್, ಕಮೀಷನರ್‍ಗಳಿಗೆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಬಿಬಿಎಂಪಿ ಮೇಯರ್ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಈಗಾಗಲೇ ಬಿಬಿಎಂಪಿ ನಿವಾಸಕ್ಕೆ ಜಾಗ ಸಿದ್ಧವಾಗಿದೆ. ಇದನ್ನು ಓದಿ: 3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!
Advertisement
ಮೇಯರ್ ಹಾಗೂ ಉಪ ಮೇಯರ್ ಬೆಂಗಳೂರು ನಿವಾಸಿಗಳು ಪ್ರತಿ ವರ್ಷವೂ ಬದಲಾಗುತ್ತಾರೆ. ಹೀಗಾಗಿ ನಿವಾಸವನ್ನು ನೀಡಿದರೆ ಸರ್ಕಾರದ ಮೇಲೆ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತದೆ. ಹೀಗಾಗಿ ಪ್ರತ್ಯೇಕ ನಿವಾಸದ ಅವಶ್ಯಕತೆ ಇಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews