ಬೆಂಗಳೂರು: ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರನ ಚಿಕಿತ್ಸೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ಚೆಕ್ ನೀಡಲಾಗಿದೆ.
ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರ ನವೀದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀದ್ ಅವರ ಅನಾರೋಗ್ಯದ ಬಗ್ಗೆ ತಿಳಿದು ಬಿಬಿಎಂಪಿ ಅವರ ಚಿಕಿತ್ಸೆಗಾಗಿ 10 ಲಕ್ಷ ರೂ. ಚೆಕ್ ನೀಡಿದೆ. ಜೊತೆಗೆ ಶೀಘ್ರವೇ ಇನ್ನೂ 10 ಲಕ್ಷ ರೂ. ಬಿಬಿಎಂಪಿ ವತಿಯಿಂದ ನವೀದ್ ಚಿಕಿತ್ಸೆಗೆ ನೀಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
Advertisement
ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೇರು ಕವಿ ಹಾಗೂ ಕನ್ನಡಿಗರ ನೆಚ್ಚಿನ 'ನಿತ್ಯೋತ್ಸವ'ದ ಕರ್ತೃ ಪ್ರೊ. ನಿಸ್ಸಾರ್ ಅಹಮದ್ ರವರ ಪುತ್ರ ಶ್ರೀ. ನವೀದ್ ರ ಚಿಕಿತ್ಸೆಗಾಗಿ ಪಾಲಿಕೆ ವತಿಯಿಂದ 10ಲಕ್ಷ ರೂ. ಚೆಕ್ ವಿತರಿಸಿದೆವು.
ಈ ವೇಳೆ ಉಪಮಹಾಪೌರರು ಶ್ರೀ. ರಾಮಮೋಹನ್ ರಾಜು ಹಾಗೂ ಮಾಜಿ ಉಪಮಹಾಪೌರರು ಶ್ರೀ. ಎಲ್.ಶ್ರೀನಿವಾಸ್ ರವರು ಇದ್ದರು. pic.twitter.com/AoSCh4tvIA
— Rakesh Singh IAS (@BBMPAdmn) January 8, 2020
Advertisement
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಪಾಲಿಕೆ ವತಿಯಿಂದ 10 ಲಕ್ಷ ರೂ. ಚೆಕ್ ಅನ್ನು ಅಪೋಲೋ ಆಸ್ಪತ್ರೆಯಲ್ಲಿಯೇ ನವೀದ್ ಅವರಿಗೆ ವಿತರಣೆ ಮಾಡಿದರು. ಈ ವೇಳೆ ಉಪಮೇಯರ್ ರಾಮ ಮೋಹನ ರಾಜು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು.