ಬೆಂಗಳೂರು: ಇನ್ಮುಂದೆ ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಇಂದಿರಾ ಕ್ಯಾಂಟೀನ್‍ಗಳ (Indira Canteens) ಜವಾಬ್ದಾರಿಯನ್ನು ಬಿಬಿಎಂಪಿ (BBMP) ಆರೋಗ್ಯ ವಿಭಾಗ ಹೊಣೆ ಹೊತ್ತಿದ್ದು, ಅದರ ನಿರ್ದೇಶನದಂತೆ ನಡೆಯಲಿದೆ.
ಈ ಮೊದಲು ಬಿಬಿಎಂಪಿ ಹಣಕಾಸು ವಿಭಾಗ ಇಂದಿರಾ ಕ್ಯಾಂಟೀನ್‍ಗಳ ಮೇಲ್ವಿಚಾರಣೆ ನಡೆಸುತ್ತಿತ್ತು. ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್‍ಗಳು ಕ್ಲೋಸ್ ಆಗುತ್ತವೆ ಎಂಬ ವದಂತಿ ಹಬ್ಬಿತ್ತು. ಅಷ್ಟೇ ಅಲ್ಲದೇ ಆಹಾರ ಪೂರೈಕೆ ಹಾಗೂ ವಿತರಣೆ ಸರಿಯಾಗಿ ಆಗುತ್ತಿಲ್ಲ ಎಂಬ ಸಾಕಷ್ಟುಗಳು ದೂರುಗಳು ಬಂದಿದ್ದವು. ಇದನ್ನೂ ಓದಿ: ದಟ್ಟ ಮಂಜಿನಿಂದ ಕಾಣದಂತಾದ ರಸ್ತೆ – ಸರಣಿ ಅಪಘಾತದಿಂದಾಗಿ 22 ವಾಹನಗಳು ಜಖಂ
Advertisement
Advertisement
ಆದರೆ ಇದೀಗ ಇಂದಿರಾ ಕ್ಯಾಂಟೀನ್‍ಗಳ ಜವಾಬ್ದಾರಿಯನ್ನು ಹಣಕಾಸು ವಿಭಾಗದಿಂದ ಆರೋಗ್ಯ ವಿಭಾಗಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ನೀಡಿದ್ದಾರೆ. ಆರೋಗ್ಯ ವಿಭಾಗಕ್ಕೆ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಿದ್ದಾರೆ. ನೋಡಲ್ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‍ಗಳ ಸಮರ್ಪಕ ನಿರ್ವಹಣೆಗೆ ಪಾಲಿಕೆ ಮುಂದಾಗಲಿದೆ. ಇದನ್ನೂ ಓದಿ: ಕಾಡಾನೆ ದಾಳಿ- ದಯಾಮರಣ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಕಾಫಿ ಬೆಳೆಗಾರ