ಬೆಂಗಳೂರು: ಸತತ ಛೀಮಾರಿಯಿಂದಲೇ ಸುದ್ದಿಯಲ್ಲಿರುವ ಬಿಬಿಎಂಪಿ ಕೊನೆಗೂ ತನ್ನ ಅಡಮಾನವಿಟ್ಟಿದ್ದ ಕಟ್ಟಡಗಳನ್ನು ಮರಳಿ ಪಡೆದಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಬಿಬಿಎಂಪಿ ಕಟ್ಟಡ ಅಡಮಾನ ವಿಚಾರ ದೊಡ್ಡ ಅಸ್ತ್ರವಾಗಿತ್ತು. 2015-16ರ ಅವಧಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬಿಬಿಎಂಪಿ ತನ್ನ ಅಧೀನದ 11 ಕಟ್ಟಡಗಳನ್ನು ಹುಡ್ಕೋ ಸಂಸ್ಥೆಗೆ 1,796 ಕೋಟಿ ರೂ.ಗಳಿಗೆ ಅಡಮಾನಕ್ಕೆ ಇಟ್ಟಿತ್ತು. ಇದೀಗ ಸಂಪೂರ್ಣ ಸಾಲ ಮುಕ್ತಗೊಂಡಿರುವ ಪಾಲಿಕೆ 11 ಕಟ್ಟಡಗಳನ್ನು ಬಿಡಿಸಿಕೊಂಡಿದೆ.
Advertisement
Advertisement
ಯಾವುದೆಲ್ಲ ಅಡಮಾನ?
ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಿಬಿಎಂಪಿ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆ, ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್, ಮಲ್ಲೇಶ್ವರ ಮಾರುಕಟ್ಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ದಾಸಪ್ಪ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳನ್ನು 2015-16ರಲ್ಲಿ ಅಡಮಾನವಿಟ್ಟಿತ್ತು. ಇದನ್ನೂ ಓದಿ: ಮೈಸೂರು ದಸರಾ ಅದ್ಧೂರಿ ಆಚರಣೆಗೆ ಸರ್ಕಾರದ ಸಿದ್ಧತೆ – ಸೆಪ್ಟೆಂಬರ್ 26ರಿಂದ ನಾಡಹಬ್ಬ
Advertisement
Advertisement
ಯಾವುದೆಲ್ಲ ವಾಪಸ್?
ನಂತರದ ವರ್ಷಗಳಲ್ಲಿ ಆರ್ಥಿಕ ಚೇತರಿಕೆ ಕಂಡಿದ್ದ ಬಿಬಿಎಂಪಿ 11 ಕಟ್ಟಡಗಳನ್ನು ಹಂತ-ಹಂತವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆಯನ್ನು 362.03 ಕೋಟಿ ರೂ., ಬಡ್ಡಿ 163.61 ಕೋಟಿ ರೂ. ಪಾವತಿಸಿ ಹುಡ್ಕೊದಿಂದ ಪಾಲಿಕೆಗೆ 2016-17ರಲ್ಲಿ ವಾಪಸ್ ಪಡೆದುಕೊಂಡಿತು. ಇದನ್ನೂ ಓದಿ: ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ
ಹಾಗೆಯೇ 2017-18ರಲ್ಲಿ ಮಲ್ಲೇಶ್ವರಂ ಮಾರುಕಟ್ಟೆ, 2018-19ರಲ್ಲಿ ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್ ವಾಪಸ್ ಮತ್ತು 2017-18ರಲ್ಲಿ ಕಡಿಮೆ ಬಡ್ಡಿದರಕ್ಕೆ ಎಸ್‌ಬಿಐನಲ್ಲಿ ಅಡಮಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ 11 ಕಟ್ಟಡಗಳನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ.