ಬೆಂಗಳೂರು: ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಹೆಚ್ಚು. ಅದರಲ್ಲಿಯೂ ಇತ್ತೀಚೆಗೆ ಕಸದ ಲಾರಿ ಡಿಕ್ಕಿಯಿಂದ ಸಾರ್ವಜನಿಕರು ಮೃತರಾಗುತ್ತಿದ್ದಾರೆ. ಸೋಮವಾರ 39 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಕಸದ ಲಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
39 ವರ್ಷದ ಪದ್ಮಿನಿ ಕಸದ ಲಾರಿಗೆ ಬಲಿಯಾದ ದುರ್ದೈವಿ. ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ ಬಳಿ ಘಟನೆ ನಡೆದಿದೆ. ಪದ್ಮಿನಿ ಅವರು ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಪದ್ಮಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
Advertisement
Advertisement
ಘಟನೆ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಪದ್ಮಿನಿ ಅವರು ಸೆಂಟ್ ಮಾಕ್ರ್ಸ್ ರೋಡ್‍ನಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ರಾಂಚ್‍ನಲ್ಲಿ ಡೆಪ್ಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
Advertisement
ಈ ಹಿಂದೆ ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಬಾಗಲೂರು-ಥಣಿಸಂದ್ರ ರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿ 76 ವರ್ಷದ ವೃದ್ಧ ರಾಮಯ್ಯ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಮಯ್ಯ ಅವರು ನೆಲಕ್ಕೆ ಬಿದ್ದದ್ದು ಲಾರಿ ಅವರ ಮೇಲೆಯೇ ಹರಿದಿತ್ತು. ಇದರಿಂದ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ