ಬೆಂಗಳೂರು: ಬಿಬಿಎಂಪಿ ಕಸದ ಮಾಫಿಯಾ ಇಡೀ ಪಾಲಿಕೆಯನ್ನ ಆರ್ಥಿಕವಾಗಿ ಮುಳುಗಿಸಿದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಹಸಿ, ಒಣ ಕಸ ಹೆಸರಲ್ಲಿ ಕೋಟಿ ಕೋಟಿ ಖರ್ಚಾಗುತ್ತಲೇ ಇದೆ. ಹೀಗೆ ನಗರದ ಹಲವೆಡೆ ಕಾಣುವ “ಸೈಂಟಿಫಿಕ್ ವೆಸ್ಟ್ ಕಲೆಕ್ಷನ್ ಬಿನ್ಸ್ ” ಕಸ ನಾವು ಕಟ್ಟುತ್ತಿರುವ ಕೋಟಿಗಟ್ಟಲೆ ತೆರಿಗೆ ಹಣವನ್ನ ನುಂಗುತ್ತಿದೆ.
ವಿದೇಶಿ ಮಾದರಿ ಕಸ ವಿಲೇವಾರಿ ಹೆಸರಲ್ಲಿ ಕಸದ ತೊಟ್ಟಿ ಕಟ್ಟಲು ಪಾಲಿಕೆ 25 ಲಕ್ಷ 75 ಸಾವಿರ ತೆರಿಗೆ ಹಣ ಸುರಿಯುತ್ತಿದೆ. ಕಸವನ್ನ ಕೈಯಲ್ಲಿ ತೆಗೆಯಬಾರದೆಂದು ಈ ವಿದೇಶಿ ಮಾದರಿ ಕಸ ತೆಗೆಯುವ ಬೀನ್ಸ್ ಗಾಗಿ ಕೋಟಿ ಕೋಟಿ ಹಣ ಪೋಲಾಗುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಸುತ್ತಮುತ್ತ ಇರುವ ಸೈಂಟಿಫಿಕ್ ವೆಸ್ಟ್ ಕಲೆಕ್ಷನ್ ಬೀನ್ ಬೆಲೆ 5 ಲಕ್ಷ 79 ಸಾವಿರ ರೂ. ಈ ಕಸದ ಡಬ್ಬಗಳಿಗೆ ಇಷ್ಟೊಂದು ಪೋಲು ಕೇಳಿ ತಲೆತಿರುಗುತ್ತದೆ. ಈ ಯೋಜನೆಯಲ್ಲಿ ಬಹುತೇಕ ನಿಯಮವನ್ನು ಗಾಳಿಗೆ ತೂರಲಾಗಿದೆ.
Advertisement
Advertisement
ಡೆಸ್ಟ್ ಬಿನ್ ಯೋಜನೆ ಜಾರಿಗೆ ತರಲು 2016 ಡಿಸೆಂಬರ್ 22 ರಂದು ಟೆಂಡರ್ ಕರೆಯಲಾಗಿತ್ತು. ಆದರೆ ಈ ಯೋಜನೆ ಒಪ್ಪಂದ ಆಗಿರುವುದು ಮಾತ್ರ ಬರೋಬ್ಬರಿ 2 ವರ್ಷ ಕಳೆದು, ಅಂದರೆ ಮಾರ್ಚ್ 2018 ರಂದು ನಡೆದಿದೆ. ಇನ್ನು ಯಾವುದೇ ಯೋಜನೆಗೆ ಕೈ ಹಾಕಬೇಕಾದರೆ ಎಲ್ಲೆಲ್ಲಿ ಡೆಸ್ಟ್ ಬಿನ್ ಹಾಕುತ್ತೀರಾ ಅಂತ ಮಾಹಿತಿ ಸಿದ್ಧ ಪಡಿಸಬೇಕು. ನಗರದ ವಿವಿಧೆಡೆ ಸೈಂಟಿಫಿಕ್ ಡೆಸ್ಟ್ ಬಿನ್ ಅಂತ ನಮೂದಿಸಿ ಯೋಜನೆಗೆ ಅನುಮೋದನೆ ಪಡೆಯಲಾಗಿದೆ.
Advertisement
ತಜ್ಞರ ಪ್ರಕಾರ ತಿಂಗಳಿಗೆ 2 ಮೆಟ್ರಿಕ್ ಟನ್ ಕಸ ಮಾತ್ರ ತಿಂಗಳಿಗೆ ಸಂಗ್ರಹಣೆ ಆಗುತ್ತದೆ. ಹಾಗೇ ಲೆಕ್ಕ ಹಾಕಿ 200 ಕಡೆ, 2 ಮೆಟ್ರಿಕ್ ಟನ್ 60 ತಿಂಗಳಿಗೆ 24 ಸಾವಿರ ಮೆಟ್ರಿಕ್ ಟನ್ 5 ವರ್ಷದಲ್ಲಿ ಸಂಗ್ರಹವಾಗಲಿದೆ. ಇದಕ್ಕೆ 1 ಮೆಟ್ರಿಕ್ ಟನ್ ಗೆ 625 ರೂ ನೀಡುವುದಾದರೆ 1 ಕೋಟಿ 50 ಲಕ್ಷ ಸಾಕಾಗುತ್ತದೆ. ಈ ಪ್ರಕಾರ 33 ಕೋಟಿಯಲ್ಲಿ ಉಳಿಕೆಯ 31 ವರೆ ಕೋಟಿ ಏನಾಯ್ತು? ಒಪ್ಪಂದಲ್ಲಿ 5 ವರ್ಷಕ್ಕೆ 5 ಲಕ್ಷ 46 ಟನ್ ಕಸ ಸಂಗ್ರಹ ಅಂತ ಅನುಮೋದಿಸಲಾಗಿದೆ.
Advertisement
ಈ ಪ್ರಕಾರ 200 ಕಡೆಗಳಲ್ಲಿ ಕಸ ತೆಗೆಯಲು 8 ವೆಹಿಕಲ್ ಬಳಸಲಿದ್ದು, ಒಂದು ವೆಹಿಕಲ್ ಗೆ 56 ಲಕ್ಷ ಬೀಳುತ್ತೆ. ಹಾಗೇ ಕೋಟಿ ಕೊಡುವ ಬದಲು ಹೊಸ ವೆಹಿಕಲ್ ಖರೀದಿಸಬಹುದಿತ್ತು. ಹೀಗೆ ಕೋಟ್ಯಾಂತರ ರೂ. ಪಾಲಿಕೆ ಹಣ ಪೋಲಾಗುತ್ತಿದೆ ಎಂದು ಕಾರ್ಪೋರೇಟರ್ ಗೌತಮ್ ಆಕ್ಷೇಪ ಹೊರಹಾಕಿದ್ದಾರೆ.
ಶಾಲೆಯ ಆವರಣದಲ್ಲಿ ಸೈಂಟಿಫಿಕಲ್ ಬಿನ್ ಹಾಕುವಾಗ ಫುಟ್ ಪಾತ್ ಒತ್ತುವರಿ ಆಗಿರುವುದು, ರಸ್ತೆಯನ್ನ ಕಸ ಆವರಿಸಿರುವುದು, ಅಗತ್ಯಕ್ಕಿಂತ ಹೆಚ್ಚು ಹಣ ಪೋಲಾಗಿರುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಡಳಿತ ಪಕ್ಷ ನಾಯಕ ಶಿವರಾಜ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ನಗರದ ರಸ್ತೆಗಳ ಬದಿಯಲ್ಲಿ ಡೆಸ್ಟ್ ಬೀನ್ ಇಡಬಾರದಿತ್ತು. ಈಗ ಬೀನ್ ಇಟ್ಟು ಪಾಲಿಕೆ ತೆರಿಗೆದಾರರ ಕೋಟಿ ಹಣ ಲೂಟಿ ಆಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv