ಬೆಂಗಳೂರು: ಮುಂದಿನ ತಿಂಗಳು ನಗರದಲ್ಲಿ ಗಣೇಶ ಹಬ್ಬ ಆಚರಿಸಲು ತಯಾರಿ ನಡೆಸುತ್ತಿದ್ದ ಜನರಿಗೆ ಬೆಂಗಳೂರು ಮಹಾನಗರ ಪಾಲಿಕೆ ಶಾಕ್ ನೀಡಿದೆ.
ಬೆಂಗಳೂರು ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ವ್ಯಕ್ತಿ, ಸಂಘ ಅಥವಾ ಸಂಸ್ಥೆ ಬಿಬಿಎಂಪಿಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಅನುಮತಿಯನ್ನು ಪಡೆದುಕೊಂಡ ಬಳಿಕ ಪ್ರತಿಷ್ಠಾಪನೆಗಾಗಿ ಬಳಸಿಕೊಂಡಿರುವ ಭೂಮಿಗೆ ಬಾಡಿಗೆಯನ್ನು ಸಹ ನೀಡಬೇಕಾಗುತ್ತದೆ. ಎಷ್ಟು ಅಗಲ ಪೆಂಡಾಲ್ ಹಾಕ್ತಾರೋ, ಅಷ್ಟಕ್ಕೆ ಬಾಡಿಗೆಯನ್ನು ನೀಡಬೇಕಾಗುತ್ತದೆ. ಈಗಾಗಲೇ ಒಂದಡಿ ಜಾಗಕ್ಕೆ ಬಿಬಿಎಂಪಿ ಬಾಡಿಗೆಯನ್ನು ಫಿಕ್ಸ್ ಮಾಡಿದೆ.
Advertisement
ದಂಡ ಎಷ್ಟು?:
ಬಿಬಿಎಂಪಿ ರಸ್ತೆಯಲ್ಲೇ ಪೆಂಡಾಲ್ ಹಾಕಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವವರು ಮೊದಲು ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳಬೇಕು. ಎಷ್ಟು ಅಗಲ ಪೆಂಡಾಲ್ ಹಾಕ್ತಾರೋ ಅಷ್ಟಕ್ಕೂ ಬಾಡಿಗೆ ಕಟ್ಟಬೇಕು. ಅದು ದಿನದ ಲೆಕ್ಕದಲ್ಲಿ ಒಂದಡಿ ಜಾಗಕ್ಕೆ 10 ರೂಪಾಯಿಯಂತೆ ಎಷ್ಟು ಅಡಿ ಪೆಂಡಾಲ್ ಹಾಕ್ತಾರೋ ಅಷ್ಟು ದುಡ್ಡನ್ನ ಬಿಬಿಎಂಪಿಗೆ ಕಟ್ಟಬೇಕು.
Advertisement
Advertisement
Advertisement
ಸ್ವತಂತ್ರ ಪೂರ್ವದಲ್ಲಿಯೇ ಗಣೇಶ ಹಬ್ಬದ ಆಚರಣೆಗೆ ಬಂದಿದೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದಕ್ಕಾಗಿ ನಮ್ಮ ಮೇಯರ್ ಕೆಲಸ ಮಾಡುತ್ತಿದ್ದಾರೆ. ಶುಲ್ಕ ವಸೂಲಿ ಮಾಡುವ ಮೂಲಕ ಹಿಂದೂ ವಿರೋಧಿ ಧೋರಣೆಯನ್ನು ಜಾರಿ ಮಾಡಲಾಗುತ್ತಿದೆ. ಮಂಗಳವಾರ ಬಿಬಿಎಂಪಿ ಕೌನ್ಸಿಲ್ ಮುಂದೆ ಎಲ್ಲ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಎಚ್ಚರಿಸಿದ್ದಾರೆ.
ಕೆಲವರು ವಿಗ್ರಹ ಪ್ರತಿಷ್ಠಾಪನೆಯನ್ನು ಮೂರು, ಏಳು, ಹದಿನೈದು ಅಥವಾ ಒಂದು ತಿಂಗಳ ಕಾಲ ಇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಿನದ ಲೆಕ್ಕದಲ್ಲಿಯೂ ಬಾಡಿಗೆಯನ್ನು ಬಿಬಿಎಂಪಿ ನಿಗದಿ ಮಾಡಿದೆ. ಒಂದು ವೇಳೆ ಬಿಬಿಎಂಪಿ ಯಿಂದ ಯಾವುದೇ ಅನುಮತಿ ಪಡೆಯದೇ ಇದ್ದಲ್ಲಿ, ಅಧಿಕಾರಿಗಳು ಪ್ರತಿಷ್ಠಾಪನೆಗೊಂಡಿರುವ ಗಣೇಶ್ ವಿಗ್ರಹವನ್ನು ವಶಕ್ಕೆ ಪಡೆಯಲಿದ್ದಾರೆ. ಈ ನಿಯಮ ಬಿಬಿಎಂಪಿಯಲ್ಲಿ ಮೊದಲಿನಿಂದಲೂ ಇತ್ತು. ಆದ್ರೆ ಯಾವ ವರ್ಷವೂ ಪರಿಣಾಮಕಾರಿಯಾಗಿ ನಿಯಮ ಜಾರಿಗೊಂಡಿರಲಿಲ್ಲ. ಈ ವರ್ಷ ಬಿಬಿಎಂಪಿ ಕಟ್ಟುನಿಟ್ಟಾಗಿ ನಿಯಮವನ್ನು ಜಾರಿಮಾಡುತ್ತಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.