ಬೆಂಗಳೂರು: ಬಿಬಿಎಂಪಿ (BBMP) ಕಟ್ಟಡದ ಬೆಂಕಿ ಪ್ರಕರಣದ ಆಂತರಿಕ ತನಿಖೆ ಚುರುಕಾಗಿದೆ. ಸ್ಥಳಕ್ಕೆ ಮುಖ್ಯ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸರು ನೀಡಿರುವ ನೋಟಿಸ್‍ಗೆ (Notice) ಅಸಮಾಧಾನ ಹೊರಹಾಕಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಇರುವ ಗುಣನಿಯಂತ್ರಣ ಪ್ರಯೋಗಾಲಯಕ್ಕೆ ಬೆಂಕಿಬಿದ್ದ ಪ್ರಕರಣದ ಆಂತರಿಕ ತನಿಖೆ ಚುರುಕಾಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ (Pralhad) ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮಧ್ಯೆ ಹಲಸೂರು ಗೇಟ್ ಪೊಲೀಸರಿಂದ ಬಿಬಿಎಂಪಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಮಾಹಿತಿ ಕೋರಿದ್ದಾರೆ. ನೋಟಿಸ್ ವಿಚಾರವಾಗಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯಿಸಿದ್ದು ನೋಟಿಸ್ ನೀಡಿರೋದು ಅಸಮಂಜಸ ಅನ್ನಿಸುತ್ತಾ ಇದೆ. ದೂರಾದಾರ ನಾನೇ ಆಗಿರೋದ್ರಿಂದ ನೋಟಿಸ್ ಯಾಕ್ ಕೊಟ್ರು ಅಂತಾ ಗೊತ್ತಿಲ್ಲ. ಹಿರಿಯ ಅಧಿಕಾರಿ ಕಮಿಷನರ್ ಜೊತೆ ಮಾತನಾಡಿ ಅವರಿಗೆ ರಿಪ್ಲೆ ಮಾಡುತ್ತೇವೆ ಅಂದಿದ್ದಾರೆ.
Advertisement
Advertisement
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಎಇಇ ಮತ್ತು ಒಬ್ಬ ಗುಮಾಸ್ತನನ್ನ ಆಂತರಿಕ ತನಿಖೆಗೆ ಒಳಪಡಿಸಬೇಕಿದೆ. ತನಿಖಾ ಹಂತದಲ್ಲಿ ಇರೋದ್ರಿಂದ ಅವಘಡ ನಡೆದ ಕಟ್ಟಡದ ಕೀ ಪೊಲೀಸ್ರ ಕೈಯಲ್ಲಿದ್ದು ಪೊಲೀಸ್ರು ಕೀ ನೀಡಿದ ಬಳಿಕ ಡೋರ್ ಓಪನ್ ಮಾಡಿ ಪಂಚನಾಮೆ ಮಾಡುತ್ತೇವೆ. ಜೊತೆಗೆ ಅವಘಡಕ್ಕೆ ಕಾರಣ ಏನು ಅಂತಾ ಪತ್ತೆ ಹಚ್ಚಿ ಗುಣನಿಯಂತ್ರಣ ವಿಭಾಗವನ್ನ ಸ್ಥಳಾಂತರ ಮಾಡೋ ಪ್ಲ್ಯಾನ್‍ನಲ್ಲಿ ಇದ್ದಾರೆ. ಇದನ್ನೂ ಓದಿ: ಬೈಕ್ ಖರೀದಿಗೆ ಪೋಷಕರು ನಿರಾಕರಿಸಿದ್ದಕ್ಕೆ ಮನೆಯನ್ನೇ ಮಾರಿದ 18 ರ ಹುಡುಗ
Advertisement
Advertisement
ಬೆಂಕಿ ಅವಘಡದ ತನಿಖೆ ಚುರುಕಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಮೂರು ಆಯಾಮಗಳ ತನಿಖೆ ಮತ್ತು ಎಫ್‍ಎಸ್‍ಎಲ್ ವರದಿ ಏನಿರಲಿದೆ ಎಂಬುದೇ ದೊಡ್ಡ ಕುತೂಹಲ ಆಗಿದೆ.
Web Stories