ಬೆಂಗಳೂರು: ಮಾಸ್ಕ್ ದಂಡ, ಕಸದ ದಂಡ, ಪ್ಲಾಸ್ಟಿಕ್ ಬಳಕೆ ದಂಡ ಹಾಕಿದ್ದ ಬಿಬಿಎಂಪಿ, ಈಗ ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದೆ.
Advertisement
ಕೆ.ಆರ್ ಮಾರ್ಕೆಟ್ ರೀತಿಯ ಬೃಹತ್ ಮಾರ್ಕೆಟ್‍ಗೆ ತರಕಾರಿ ಮಾರಲು ತಂದವರು ವ್ಯಾಪಾರ ನಡೆಸಿದ ಬಳಿಕ ಉಳಿದ ತರಕಾರಿಗಳನ್ನು ಮಂಡಿಯಲ್ಲೇ ಬಿಟ್ಟು ಹೋಗ್ತಾರೆ. ಆ ರೀತಿ ತರಕಾರಿಗಳನ್ನು ಮಂಡಿಯಲ್ಲಿ ಬಿಟ್ಟು ಹೋದವರ ಮೇಲೆ ಇನ್ಮುಂದೆ ದಂಡ ಬೀಳಲಿದೆ. ಕೆ.ಆರ್ ಮಾರ್ಕೆಟ್ ಬಳಿ ಮಾರ್ಷಲ್‍ಗಳು ಮೈಕ್‍ನಲ್ಲಿ ಈ ರೀತಿ ಅನೌನ್ಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ
Advertisement
Advertisement
ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಂಡ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತರಕಾರಿ ಎಷ್ಟು ಬಿಟ್ಟು ಹೋಗಿದ್ದಾರೆ ಎಂಬ ತೂಕದ ಆಧಾರದ ಮೇಲೆ ದಂಡ ಹಾಕಲಾಗುತ್ತದೆ. ಅರ್ಧ ಟನ್, ಒಂದು ಟನ್‍ವರೆಗೂ ತರಕಾರಿ ಮಾರ್ಕೆಟ್‍ನಲ್ಲಿ ಬಿಟ್ಟು ಹೋದ್ರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಹಾಕಲು ನಿರ್ಧರಿಸಲಾಗಿದೆ. ಆದರೆ, ವ್ಯಾಪಾರಿಗಳು ನಮಗೆ ಲಾಭ ಆಗೋದೇ ನೂರು ರೂಪಾಯಿ. ಇದನ್ನು ದಂಡವಾಗಿ ಕಟ್ಟಿದರೆ ನಮ್ಮ ಗತಿ ಏನು ಎಂದು ದಂಡ ಪ್ರಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಗೆ ಮುಂದಾಗುತ್ತಾರಾ ಡಿಕೆ ಬದ್ರರ್ಸ್?
Advertisement
ವೇಸ್ಟ್ ತರಕಾರಿಯನ್ನು ಹೀಗೆ ಮಾಡಿ:
ಬಿಬಿಎಂಪಿ ಕಸದ ಲಾರಿಗೆ ವೇಸ್ಟ್ ತರಕಾರಿ ಹಾಕಿ. ವ್ಯಾಪಾರದ ವೇಳೆ ಪಕ್ಕದಲ್ಲಿ ಚೀಲ ಇಟ್ಕೊಂಡು ಕಸವನ್ನು ಹಾಕಿ. ಕೊಳೆತ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ ಕಸದ ಲಾರಿಗೆ ಹಾಕಿ. ತರಕಾರಿ ಮೇಲೆ ಹೊದಿಕೆಗೆ ಹಾಕಿದ ಪೇಪರ್, ಹುಲ್ಲು, ಚೀಲವನ್ನು ಪ್ರತ್ಯೇಕವಾಗಿ ಲಾರಿಗೆ ಹಾಕಿ ಈ ಮೂಲಕ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ.