ಬೆಂಗಳೂರು: ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬರುವ ಸಂಬಳ ಜೀವನಕ್ಕೆ ಸಾಲುತ್ತಿಲ್ಲ ಎಂದು ಬಿಬಿಎಂಪಿ ಕ್ಲರ್ಕ್ ಹೇಳಿದ್ದಾರೆ.
Advertisement
ನಿವಾಸದ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬರುವ ಸಂಬಳ ನನಗೆ ಸಾಕಾಗುತ್ತಿಲ್ಲ. ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೇನೆ. ಕಸಾಪ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ಹೀಗಾಗಿದೆ. ಎಸಿಬಿ ದಾಳಿ ಕಾನೂನಾತ್ಮಕವಾಗಿದೆ. ಕಾಲವೇ ಇದಕ್ಕೆಲ್ಲ ಉತ್ತರ ಹೇಳುತ್ತದೆ. ನನ್ನನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಕಾಲಚಕ್ರ ತಿರುಗಿ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್
Advertisement
ನಾನು ಬೇನಾಮಿ ಆಸ್ತಿ ಮಾಡಿಲ್ಲ. 59,000 ರೂ. ನಗದು, 556 ಗ್ರಾಂ ಚಿನ್ನ ಇದೆ. ಒಂದೂವರೆ ಕೆ.ಜಿ ಬೆಳ್ಳಿ ಇದೆ. ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದವರನ್ನೆಲ್ಲ ಟಾರ್ಗೆಟ್ ಮಾಡಿದ್ದಾರೆ. ನಾನು ಸರ್ಕಾರಕ್ಕೆ ಎಲ್ಲ ಆಸ್ತಿಯ ವರದಿಯನ್ನು ನೀಡಿದ್ದೀನಿ. ನನಗೆ ನೋಟಿಸ್ ಕೊಟ್ಟಿದ್ದಾರೆ ಎಂದಿದ್ದಾರೆ.
Advertisement
ಎಸಿಬಿ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಾನು ಕಾನೂನು ಬದ್ಧವಾಗಿದ್ದೇನೆ. ಬಿಬಿಎಂಪಿಯಲ್ಲಿ ತಂದೆ-ತಾಯಿ ಪೌರಕಾರ್ಮಿಕರಾಗಿ ದುಡಿದವರು. ಬಿಬಿಎಂಪಿ ಅಧಿಕಾರಿಗಳಿಗೆ ಉತ್ತರಾದಾಯಿತ್ವ ಇದ್ದೀನಿ. ನಾನು ಕಾನೂನು ಬದ್ಧವಾಗಿ ಬದುಕುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಹಾನಗರ ಪಾಲಿಕೆ ನನ್ನ ತಾಯಿ ಇದ್ದಂತೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
Advertisement
ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಇದೆಲ್ಲಾ ಆಗಿದೆ. ಉಮಾದೇವಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಕ್ಕೆ ಅವರನ್ನೂ ಗುರಿ ಮಾಡಿದ್ದಾರೆ. ಎಲ್ಲಾ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಅವರು ಕೇಳಿದ 24 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಯಣ್ಣ ಅವರಿಗೆ ಬೆಂಗಳೂರಲ್ಲಿ 4 ವಾಸದ ಮನೆ, ವಿವಿಧ ಕಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 2 ಬೈಕ್ ಮತ್ತು 1 ಕಾರ್, 59 ಸಾವಿರ ನಗದು, 10 ಲಕ್ಷ ರೂ. ಎಫ್‍ಡಿ, ಉಳಿತಾಯ ಖಾತೆಯಲ್ಲಿ 1.50 ಲಕ್ಷ ರೂ., 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿವೆ. ಅವುಗಳನ್ನು ವಶಕ್ಕೆ ಪಡೆದು ಎಸಿಬಿ ಪರಿಶೀಲನೆ ನಡೆಸಿದ್ದಾರೆ.