ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಹಿನ್ನೆಲೆಯಲ್ಲಿ ಮೆಗಾ ಟೂರ್ ಮಾಡಲು ಪಾಲಿಕೆ ಅಧಿಕಾರಿಗಳು, ನೌಕರರು ಸಜ್ಜಾಗುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ಕಾಶಿ (Kashi) ಯಾತ್ರೆಗೆ ಸಾವಿರಾರು ಸಿಬ್ಬಂದಿ ಸಾಕ್ಷಿಯಾಗಲಿದ್ದಾರೆ.
ಆಧ್ಯಾತ್ಮ ವರ್ಸಸ್ ಕನ್ನಡ ಪ್ರೇಮ ತೋರಲು ಮೆಗಾ ಟ್ರಿಪ್‍ಗೆ ಸಿದ್ಧತೆ ನಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಶಿಯಲ್ಲಿ ಕಾಶಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 1,300 ಜನರು ಬೆಂಗಳೂರಿಂದ ಕಾಶಿ ಟ್ರಿಪ್ ಮಾಡುತ್ತಿದ್ದಾರೆ.
ಇದೇ ತಿಂಗಳ 11, 12 ಹಾಗೂ 13 ರಂದು ಕಾಶಿ ಉತ್ಸವ ನಡೆಸಲು ತೀರ್ಮಾನವಾಗಿದೆ. ಈ ಪ್ರಕಾರ ಬೆಂಗಳೂರು ರೈಲ್ವೆ ಮೂಲಕ ಬರೋಬ್ಬರಿ 800 ಜನ ನೌಕರರು ಸೇರಿದಂತೆ ಹಲವು ಕುಟುಂಬ ಸದಸ್ಯರು ಪ್ರಯಾಣ ಬೆಳೆಸಲಿದ್ದಾರೆ. ತದನಂತರ ಚಿತ್ರನಟಿ ಶಿಲ್ಪಾಶೆಟ್ಟಿ, ಎಸ್.ಎಂ. ಕೃಷ್ಣ, ತಾರಾ ಸೇರಿದಂತೆ ಹಲವು ಸೆಲಬ್ರಿಟಿಗಳು ಸಹ ಈ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಇದಕ್ಕಾಗಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಶಿಲ್ಪಾ ಶೆಟ್ಟಿ ಭೇಟಿ ಮಾಡಿ ಆಹ್ವಾನ ನೀಡಿದ್ದು, ಅವರೆಲ್ಲರೂ ಭಾಗವಹಿಸುವತ್ತ ಗ್ರೀನ್ ಸಿಗ್ನಲ್ ಸಹ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಇದನ್ನೂ ಓದಿ: ATM ಕಳ್ಳರ ಖತರ್ನಾಕ್ ಪ್ಲಾನ್- ಯೂಟ್ಯೂಬ್‍ನಲ್ಲಿ ವೀಡಿಯೋ ನೋಡಿ ಟ್ರೈನಿಂಗ್
ವರ್ಷದ ಹಿಂದೆ ತಲಾ 2 ಸಾವಿರ ರೂ.ನಂತೆ ಟಿಕೆಟ್ ಬುಕ್ ಮಾಡಿದ್ದು, ಬಹುತೇಕ ನೌಕರರು, ಅಧಿಕಾರಿಗಳು ಕಾಶಿ ಯಾತ್ರೆ ಹಿನ್ನೆಲೆಯಲ್ಲಿ ಚಕ್ಕರ್ ಹಾಕುವುದು ಖಚಿತವಾಗಿದೆ. ಇದಕ್ಕಾಗಿಯೇ ಪೂರ್ವ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಸೆಲಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ನ.11 ರಂದು ಖುದ್ದು ಸರ್ಕಾರವೇ ಕಾಶಿಯಾತ್ರೆಗೆ ರೈಲು ಸೇವೆ ಒದಗಿಸಲಿದೆ. ಈ ವೇಳೆ ಬಿಬಿಎಂಪಿ ನೌಕರರು ಕಾಶಿ ಟೂರ್ ಮಾಡಲು ಸಜ್ಜಾಗುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಅಂತಾ ಕಾದುನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು