ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ ಮಿಷನ್)ಗಳಿಗೆ ಬ್ಲಾಕ್‍ಚೈನ್ ಲಿಂಕ್ ಟೆಕ್ನಾಲಜಿ ಅಳವಡಿಸುವಂತೆ ಸಾಮಾಜಿ ಕಾರ್ಯಕರ್ತರೊಬ್ಬರು ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ
ಚುನಾವಣೆಯಲ್ಲಿ ಮತದಾನಕ್ಕೆ ಬಳಸುವ ಇವಿಎಂ ಮಿಷನ್‍ಗಳ ಬಗ್ಗೆ ಅನೇಕ ರೀತಿಯ ಟೀಕೆ ಟಪ್ಪಣಿ, ಅನುಮಾನಗಳು, ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷದ ನಾಯಕರು ಇವಿಎಂ ಮಿಷನ್‍ಗಳನ್ನು ಮತದಾನಕ್ಕೆ ಬಳಸುವುದನ್ನು ವಿರೋಧಿಸಿದ್ದಾರೆ. ಹೀಗಾಗಿ ಇವಿಎಂ ಮಿಷನ್‍ಗಳಿಗೆ ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಸುವಂತೆ ರಾಜ್ಯ ಚುನಾವಣಾ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಮನವಿ ಸಲ್ಲಿಸಿದ್ದಾರೆ.
Advertisement
Advertisement
ಮುಂಬುವರ ಬಿಬಿಎಂಪಿ ಚುನಾವಣೆಯಲ್ಲಿ ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಸುವಂತೆ ಚುನಾವಣಾ ಆಯುಕ್ತರಿಗೆ ವೆಂಕಟೇಶ್ ಅವರು ಮನವಿ ಮಾಡಿಕೊಂಡಿದ್ದಾರೆ. ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಕೆಯಿಂದ ಸಾಫ್ಟ್‍ವೇರ್ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಇವಿಎಂ ಮಿಷನ್ ಒಳಗಿನ ಮತಗಳನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಈ ಮೂಲಕ ಮತದಾರರ ನೀಡಿರುವ ಚಿಹ್ನೆಗೆ ಮತ ಭದ್ರವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Advertisement
ಈಗಾಗಲೇ ತೆಲಂಗಾಣ ಸರ್ಕಾರ ಬ್ಲಾಕ್‍ಚೈನ್ ಟೆಕ್ನಾಲಜಿಯನ್ನು ಕಂದಾಯ ಇಲಾಖೆ ಮತ್ತು ಇತರ ಇಲಾಖೆಯಲ್ಲಿ ಡೇಟಾ ಎಂಟ್ರಿ ಭದ್ರತೆಗಾಗಿ ಅಳವಡಿಸಿಕೊಂಡಿದೆ. ಇದರಿಂದ ಖಾತೆಗಳ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯದಲ್ಲೂ ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ದೇಶದಲ್ಲಿ ನಡೆದ ಯಾವುದೇ ಚುನಾವಣೆಯಲ್ಲಿ ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಕೆ ಮಾಡಿಕೊಂಡಿಲ್ಲ. ಮುಂಬರುವ ಬಿಬಿಎಂಪಿ ಉಪಚುನಾವಣೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಸ್ಥಳೀಯ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬ್ಲಾಕ್‍ಚೈನ್ ಟೆಕ್ನಾಲಜಿ ಅಳವಡಿಸಿಕೊಂಡ ಖ್ಯಾತಿಗೆ ಕರ್ನಾಟಕ ಪಾತ್ರವಾಗಲಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.