ಬೆಂಗಳೂರು: ಬಿಬಿಎಂಪಿಯನ್ನು (BBMP) ಐದು ಭಾಗ ಮಾಡಿರುವ ಸರ್ಕಾರದ ನಡೆಯನ್ನು ಬಿಜೆಪಿ (BJP) ನಾಯಕರು ತೀವ್ರವಾಗಿ ವಿರೋಧಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್, ಇದು ಬೆಂಗಳೂರಿನ ಆಡಳಿತ, ಅಭಿವೃದ್ಧಿಗೆ ಮಾರಕ. ಇದರ ಹಿಂದೆ ಸ್ವಾರ್ಥ, ರಾಜಕೀಯದ ದುರುದ್ದೇಶ ಇದೆ. ಕಾಂಗ್ರೆಸ್ ಡಿವೈಡ್ ಆ್ಯಂಡ್ ರೂಲ್ ನೀತಿ ಅನುಸರಿಸಿದೆ. ಇವರು ಬೆಂಗಳೂರನ್ನು ರಾಜಕೀಯದ ಪ್ರಯೋಗಾಲಯವಾಗಿ ಮಾಡಿಕೊಂಡಿದ್ದಾರೆ. ಇದು ಅಧಿಕಾರದ ದುರುಪಯೋಗ. ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ. ಬೆಂಗಳೂರಿನ ವಿಭಜನೆಯನ್ನು ನಾವು ಒಟ್ಟಾಗಿ ವಿರೋಧ ಮಾಡುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ. ಬೆಂಗಳೂರಿನಲ್ಲಿ ಮನೆ ಮನೆಗೂ ಜಾಗೃತಿ ಮೂಡಿಸುತ್ತೇವೆ ಎಂದರು. ಇದನ್ನೂ ಓದಿ: ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ಬೆಂಗಳೂರನ್ನು ಹೋಳು ಮಾಡಿ ಅಭಿವೃದ್ಧಿ ಮಾಡುತ್ತೇವೆ ಅಂತ ಓಳು ಬಿಡುತ್ತಾರೆ. ಯಾವ ಪುರುಷಾರ್ಥಕ್ಕೆ ಐದು ಭಾಗ ಮಾಡಿದ್ರು? ಹೋಳು ಮಾಡುವುದರಿಂದ ಏನು ಅಭಿವೃದ್ಧಿ ಆಗುತ್ತದೆ? ಏನು ಸರಿ ಮಾಡ್ತೀರಿ? ರಸ್ತೆ, ತ್ಯಾಜ್ಯ, ಸಂಚಾರ ಸಮಸ್ಯೆ ಸರಿ ಹೋಗುತ್ತಾ? ಏನೂ ಆಗೋದಿಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರು ಭಾಗಮಾಡಿ ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಬೆಂಗಳೂರು ನಗರದ ಜನರ ಶಾಪ ಕಾಂಗ್ರೆಸ್‌ಗೆ ತಟ್ಟುತ್ತೆ. ನಾವಂತೂ ಸ್ಪಷ್ಟ ವಿರೋಧ ಮಾಡುತ್ತೇವೆ. ಬ್ರ‍್ಯಾಂಡ್ ಬೆಂಗಳೂರು ಬಿಟ್ರಿ, ಈಗ ಹೋಳು ಬೆಂಗಳೂರು. ಬೆಂಗಳೂರು ವಿಭಜನೆಯಿಂದ ತಾರತಮ್ಯ ಶುರುವಾಗುತ್ತೆ. ಪಾಲಿಕೆಗಳ ನಡುವೆ ಬೆಂಕಿ ಹತ್ತುತ್ತೆ, ಆದಾಯ ತಾರತಮ್ಯ ಆಗುತ್ತೆ. ಎಲ್ಲ ಹೋಳು ಹೋಳು ಬೆಂಗಳೂರು ಹಾಳು ಹಾಳು ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ