ಬೆಂಗಳೂರು: ಸುಂಕದಕಟ್ಟೆ ದ್ವಿಚಕ್ರ ವಾಹನ ಚಾಲಕಿ ಸಾವು ಪ್ರಕರಣದ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಇನ್ಮುಂದೆ ರಸ್ತೆ ಅಗೆದವರೇ ರಸ್ತೆ ರಿಪೇರಿ ಮಾಡಿಸುವ ಹೊಣೆಯನ್ನು ಹೊಂದಿರುತ್ತಾರೆ ಎಂದು ಆದೇಶಿಸಿದೆ.
Advertisement
ಸೋಮವಾರ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಹರಿದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕಸದ ಲಾರಿಯಿಂದಾಗಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿರುವ ಹಿನ್ನೆಲೆ ಘನ ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ
Advertisement
Advertisement
ಎಲ್ಲಾ ಕಾಂಪ್ಯಾಕ್ಟರ್, ಟಿಪ್ಪರ್‌ಗಳು ಫಿಟ್ ನೆಸ್ ಸರ್ಟಿಫಿಕೇಟ್ ಹೊಂದಿರಬೇಕು. ಕಸದ ವಾಹನಗಳ ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು. ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಈ ಪ್ರಮಾಣಪತ್ರಗಳನ್ನ ಆಗಿಂದಾಗ್ಗೆ ಪರಿಶೀಲಿಸುವುದು. ಕಾರ್ಯಪಾಲಕ ಅಭಿಯಂತರ (ಸಾರಿಗೆ) ಇವರು ಕಸದ ಲಾರಿಗಳ ರ್ಯಾಂಡಮ್ ಚೆಕ್ಕಿಂಗ್ ಮಾಡಬೇಕು. ಚಾಲಕರ ವಾಹನ ಚಾಲನ ಸಾಮರ್ಥ್ಯವನ್ನು ನಿಗದಿತ ಮಾನದಂಡ ಬಳಸಿ ಪರಿಶೀಲಿಸುವುದು ಹೀಗೆ ಹಲವರು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ
Advertisement
ಇದೀಗ ಜಲಮಂಡಳಿ ಪೈಪ್ ಲೈನ್, ಬೆಸ್ಕಾಂ ಕಾಮಗಾರಿ ಹೀಗೆ ಯಾವುದೇ ವಿಚಾರವಾಗಿ ಯಾರೇ ರಸ್ತೆ ಅಗೆದವರೂ ರಸ್ತೆ ರಿಪೇರಿ ಹೊಣೆ ಮತ್ತು ಏನೇ ಅಪಘಾತ, ಅನಾಹುತಗಳಾದರೂ ಸಂಬಂಧಿಸಿದವರೇ ಹೊಣೆಯಾಗಿರುತ್ತಾರೆ ಎಂದು ಬಿಬಿಎಂಪಿ ಸೂಚಿಸಿದೆ.