– ಫ್ಲೈಓವರ್, ಬ್ರಿಡ್ಜ್, ಅಂಡರ್‌ಪಾಸ್‌ಗಳ ತಪಾಸಣೆಗೆ ಪ್ಲಾನ್
ಬೆಂಗಳೂರು: ಸುಮನಹಳ್ಳಿ ಫ್ಲೈಓವರ್ ಕುಸಿತದಿಂದಾಗಿ ಬಿಬಿಎಂಪಿ ಎಚ್ಚೆತುಕೊಂಡಿದ್ದು, ಬೆಂಗಳೂರಿನ ಫ್ಲೈಓವರ್, ಬ್ರಿಡ್ಜ್, ಅಂಡರ್‌ಪಾಸ್‌ಗಳ ತಪಾಸಣೆ ನಡೆಸಲು ಪಾಲಿಕೆ ಮುಂದಾಗಿದೆ.
ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಿದೆ. ನಗರದ ಪ್ರಮುಖ ಮೇಲ್ಸೇತುವೆಗಳ ಸೂಚನಾ ಫಲಕ, ಮಾರ್ಗಸೂಚಿ, ಡಾಂಬರೀಕರಣ, ಬುಷ್ ಹಾಗೂ ಕೊಂಡಿಗಳ ಗುಣಮಟ್ಟಗಳನ್ನು ಸರಿಪಡಿಸುವ ಕೆಲಸ ಮಾಡಲಿದೆ. ಇದರ ಜೊತೆಗೆ ಇವುಗಳಿಗೆ ಬಣ್ಣ ಬಳಿಯುವುದು, ಫ್ಲೈಓವರ್, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಸೋರುತ್ತಿದ್ದರೆ ಅದನ್ನು ತಡೆಯುವುದಕ್ಕೂ ಬಿಬಿಎಂಪಿ ಯೋಜನೆ ರೂಪಿಸಿಕೊಂಡಿದೆ.
Advertisement
Advertisement
ಮೊದಲ ಹಂತದಲ್ಲಿ ನಗರದ ಪ್ರಮುಖ 24 ಫ್ಲೈಓವರ್, ಅಂಡರ್ ಪಾಸ್ ಮತ್ತು ಬ್ರಿಡ್ಜ್‌ಗಳ ಲೋಪದೋಷಗಳನ್ನು ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂಪಾಯಿ ಮೀಸಲಿರಿಸಿದ್ದು, ಸದ್ಯದಲ್ಲೆ ಟೆಂಡರ್ ಕರೆಯಲು ಸಿದ್ಧತೆ ನಡೆಸುತ್ತಿದೆ.
Advertisement
ಸುಮನಹಳ್ಳಿ ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಒಂದು ಬದಿಯ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಸೇತುವೆ ನಿರ್ಮಾಣಗೊಂಡಿದೆ ಎಂದು ಖಾಸಗಿ ಸಂಸ್ಥೆಯೊಂದು ವರದಿ ನೀಡಿತ್ತು.
Advertisement
ಈ ವರದಿಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಲಘು ವಾಹನಗಳಿಗೆ ಮುಕ್ತವಾಗಿದ್ದ ಸುಮನಹಳ್ಳಿ ಮೇಲ್ಸೇತುವೆಯನ್ನು ಒಂದು ತಿಂಗಳು ಬಂದ್ ಮಾಡಲು ಬಿಬಿಎಂಪಿ ಮುಂದಾಗಿದೆ. ಇದೇ ತಿಂಗಳ 15 ರಿಂದ ಭಾರೀ ವಾಹನಗಳ ಸಂಚಾರಕ್ಕೆ ಮೇಲ್ಸುತುವೆ ಎರಡು ಕಡೆಯಿಂದಲೂ ಅವಕಾಶ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.