ಬೆಂಗಳೂರು: ಬಿಬಿಎಂಪಿಯ ಡಿ- ಗ್ರೂಪ್ ನೌಕರನೊಬ್ಬ ತಿಂಗಳಿಗೆ 3 ಸಾವಿರ ಸಂಬಳ ಪಡೆಯುತ್ತಲೇ 12 ಬಾರಿ ವಿದೇಶ ಸುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.
ಡಿ ಗ್ರೂಪ್ ನೌಕರ ಬಾಬು ಈ ರೀತಿ 12 ಬಾರಿ ವಿದೇಶ ಸುತ್ತಿದ್ದಾನೆ. ಈತ ಬಿಬಿಎಂಪಿಗೆ 1988ರಲ್ಲಿ ಎಂಟ್ರಿ ಕೊಟ್ಟಿದ್ದಾನೆ. ತಮ್ಮ ಕೆಲಸದ ಅವಧಿಯಲ್ಲಿ ಕಸ ವಿಲೇವಾರಿ ಕಲಿಯಲು 4 ಬಾರಿ ವಿದೇಶಕ್ಕೆ ಹೋಗಿದ್ದು, ಮತ್ತೊಂದೆಡೆ 28 ವರ್ಷ ಬಿಬಿಎಂಪಿ ಕೆಲಸದಲ್ಲಿ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾನೆ ಎಂದು ಡಿ-ಗ್ರೂಪ್ ನೌಕರ ಬಾಬು ವಿರುದ್ಧ ಬಿಎಂಟಿಎಫ್‍ಗೆ ದೂರು ಸಲ್ಲಿಸಲಾಗಿದೆ.
Advertisement
Advertisement
ಸದ್ಯ ಡಿ ಗ್ರೂಪ್ ನೌಕರ ಬಾಬು ವಿರುದ್ಧ ಎಸಿಬಿ ದಾಳಿಯೂ ಮಾಡಿದೆ. ಈ ವೇಳೆ ಅನುಮತಿ ಇಲ್ಲದೇ ವಿದೇಶ ಪ್ರವಾಸ ಮಾಡಿರುವ ಬಗ್ಗೆ ಕಚೇರಿ ವರದಿಯನ್ನು ಕೇಳಿದೆ. ಆಗ ಬರೋಬ್ಬರಿ 12 ಬಾರಿ ಪ್ರವಾಸ ಮಾಡಿರುವ ಬಗ್ಗೆ ಮಾಹಿತಿ ತಿಳಿದಿದೆ. ನೌಕರ ಬಾಬು 4 ಬಾರಿ ಕಸ ವಿಲೇವಾರಿ ಕಲಿಯಲು ವಿದೇಶ ಹೋಗಲು ಅನುಮತಿ ಪಡೆದಿದ್ದಾನೆ. ಆದರೆ ಉಳಿದ ವಿದೇಶ ಪ್ರವಾಸದ ವಿಚಾರ ಈಗ ಕೋರ್ಟ್ ಮೆಟ್ಟಿಲು ಹತ್ತಿದೆ.
Advertisement
ನೌಕರ ಬಾಬು 28 ವರ್ಷ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದಾನೆ. ಆದರೆ ಸುಮಾರು 85 ಲಕ್ಷ ಆದಾಯ ಲೆಕ್ಕ ನೀಡಲಾಗಿದೆ. ಅಚ್ಚರಿಯೆಂದರೆ ಖರ್ಚು ವೆಚ್ಚ ಕಳೆದ ಆದಾಯಕ್ಕಿಂತ 66 ಲಕ್ಷಕ್ಕೂ ಹೆಚ್ಚು ಆಸ್ತಿ ಪತ್ತೆಯಾಗಿದೆ. ಈ ಸಂಬಂಧ ಎಸಿಬಿ ದಾಳಿಯೂ ಆಗಿದೆ. ಅಲ್ಲದೇ ಅನುಮತಿ ಇಲ್ಲದೇ ದುಬೈ ಸೇರಿದಂತೆ ಬೇರೆ ಬೇರೆ ದೇಶಗಳ ಪ್ರವಾಸಕ್ಕಾಗಿ ಪಾಲಿಕೆ ಆಯುಕ್ತರು ವಜಾಗೊಳಿಸುವ ನಿರ್ಧಾರ ಬಗ್ಗೆ ಸಹ ಕಳೆದ 2 ತಿಂಗಳ ಹಿಂದೆ ಪ್ರಕಟವಾಗಿದೆ. ಆದರೂ ಈಗ ಇನ್ನೂ ಕೆಲಸದಿಂದ ವಜಾವಾಗಿಲ್ಲ.
Advertisement
ಇದೇ ಡಿ ಗ್ರೂಪ್ ನೌಕರ ಬಾಬು ವಿರುದ್ಧ ಪಾಲಿಕೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಿಎಂಟಿಎಫ್ ಗೆ ದೂರು ದಾಖಲಾಗಿದೆ. ಸದ್ಯಕ್ಕೆ ನೌಕರ ಬಾಬು ಸಿವಿರಾಮನ್ ನಗರ ಪಾಲಿಕೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಪಾಲಿಕೆಯಲ್ಲಿ ಈ ಪ್ರಕರಣ ಸದ್ಯ ಚರ್ಚೆಗೆ ಗ್ರಾಸವಾಗಿದೆ. ವಿದೇಶ ಪ್ರವಾಸ ಮಾಡಿ ವರ್ಷಗಳೇ ಕಳೆದರೂ, ಆಯುಕ್ತರು ವಜಾ ವಿಚಾರವಾಗಿ ತೆಗೆದುಕೊಂಡ ನಿರ್ಧಾರ 2 ತಿಂಗಳ ಹಿಂದಿನದ್ದಾಗಿದೆ. ಇಷ್ಟೆಲ್ಲ ಆದರೂ ಬಾಬು ಮಾತ್ರ ಎಲ್ಲ ಕೇಸ್ ಕೋರ್ಟ್ ಅಂಗಳದಲ್ಲಿದೆ. ನನಗೆ 300 ಕೋಟಿ ಆಸ್ತಿ ಇದೆ. ಕೇಸ್ ಎದುರಿಸಲು ನಾ ಸಿದ್ಧ ಎಂದು ಸಮಜಾಯಿಸಿ ನೀಡಿದ್ದಾನೆ.
ಇತ್ತ ಬಾಬು ವಿದೇಶ ಪ್ರವಾಸ ಹಾಗೂ ಮೀತಿ ಮೀರಿದ ಆದಾಯದ ಬಗ್ಗೆ ವಕೀಲ ರಾಮಕೃಷ್ಣ ಈಗಲೂ ಕಾನೂನು ಹೋರಾಟ ಮುಂದುವರಿಸಿದ್ದಾರೆ. 2 ಸಾವಿರ ತೆಗೆದುಕೊಳ್ಳುತ್ತಿದ್ದ ಡಿ ಗ್ರೂಪ್ ನೌಕರ ಬಾಬು ಈಗ 30 ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv