– ಬಿಬಿಎಂಪಿ ವತಿಯಿಂದ 25 ಲಕ್ಷ ರೂ. ಪರಿಹಾರ
ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ವಾಪಸ್ ಕರೆತರುತ್ತಿರುವುದು ಸಂತಸ ವಿಷಯ. ನಮ್ಮ ಸಹೋದರರ ನೋವಿನಲ್ಲೂ ಅವರು ವಾಪಸ್ ಬರುತ್ತಿರುವುದು ಸಂತಸ ತಂದಿದೆ ಎಂದು ಯೋಧರ ಗುರು ಅವರ ಪೋಷಕರು ಹೇಳಿದ್ದಾರೆ.
ಬಿಬಿಎಂಪಿ ಕಚೇರಿಗೆ ಆಗಮಿಸಿದ್ದ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಭಿನಂದನ್ ವಾಪಸ್ ಬರುತ್ತಿರುವುದು ನಮ್ಮ ಮತ್ತೊಬ್ಬ ಮಗ ವಾಪಸ್ ಬರುತ್ತಿದಂತೆ ಎನಿಸುತ್ತಿದೆ ಎಂದರು. ಇದೇ ವೇಳೆ ಮಾತನಾಡಿದ ಗುರು ಸಹೋದರ, ನನ್ನ ದೊಡ್ಡಣ್ಣ ವಾಪಸ್ ಬರುತ್ತಿದ್ದಾರೆ. ಆದರೆ ನಮ್ಮನ್ನು ಮೋಸ ಮಾಡಿದವರು ಈ ದೇಶದಲ್ಲಿ ಮತ್ತೆ ಉಳಿದಂತೆ ಮಾಡಬೇಕು ಎಂದರು.
Advertisement
Advertisement
ಈ ವೇಳೆ ಮಾತನಾಡಿದ ಬಿಬಿಎಂಪಿ ಮೇಯರ್ ಅವರು, ಪಾಲಿಕೆ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಿಬಿಎಂಪಿ ಸದಸ್ಯರ ಗೌರವಧನ ಹಾಗು ನೌಕರರ ಹಣ ಒಟ್ಟು ಸೇರಿ ಹಣ ನೀಡಲಾಗಿದೆ. ಅಲ್ಲದೇ ಪಾಲಿಕೆ ನೌಕರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಧ ಗುರು ಅವರ ಪ್ರತಿಮೆಯನ್ನು ನಿರ್ಮಿಸಲು ಮನವಿ ಮಾಡಿದ್ದಾರೆ. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪ ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement
ಇದೇ ವೇಳೆ ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ ಗುರು ಅವರ ತಾಯಿ ಚಿಕ್ತಾಯಮ್ಮ ಅವರು, ನಿಮ್ಮೆಲರ ಸಹಾಯದಿಂದ ನಾವು ಮತ್ತೆ ನಗು ಕಾಣಲು ಸಾಧ್ಯವಾಗುತ್ತಿದೆ. ಅತ್ತೆ, ಸೊಸೆ ಮಧ್ಯೆ ಜಗಳ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೆರಿದ್ದಾರೆ ಎಂದು ವರದಿಯಾಗಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ನಮ್ಮ ಸೊಸೆ ಮಗಳ ರೀತಿ ಇದ್ದೇವೆ. ಜನರ ಮಾತಿನಿಂದ ಮತ್ತೆ ನೋವು ಆಗುತ್ತಿದೆ. ದಯವಿಟ್ಟು ಇದನ್ನೆಲ್ಲ ಯಾರೂ ನಂಬಬೇಡಿ, ಸದ್ಯ ನಮಗೇ ಹಣಕ್ಕಿಂತ ನೆಮ್ಮದಿ ಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದರು.
Advertisement
ಮಗನ ಸುದ್ದಿ ಕೇಳಿ ಮನೆಯಲ್ಲಿ ಯಾರು ಒಂದು ವಾರ ಅನ್ನ ತಿನ್ನಲು ಆಗದ ಸ್ಥಿತಿ ಇತ್ತು. ಸದ್ಯ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿದೆ. ನನಗೆ ಹಣ ಬೇಡ, ನಮ್ಮ ಗೌರವ ಉಳಿಸಿಕೊಂಡರೆ ಸಾಕು ಎಂದು ಕಣ್ಣೀರಿಟ್ಟರು. ಈ ವೇಳೆ ಗುರು ತಂದೆ ಹೊನ್ನಯ್ಯ ಹಾಗೂ ಸಹೋದರ ಹಾಜರಿದ್ದರು.
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv