ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯ ವೇಳೆ ಮಹಿಳಾ ಕಾರ್ಪೊರೇಟರ್ ಒಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ರಾಜಕುಮಾರ್ 106 ವಾರ್ಡ್ ಸದಸ್ಯರದ ರೂಪಾ ಸಭೆಯಲ್ಲಿ ಕುಸಿದು ಬಿದ್ದಿದ್ದಾರೆ. ಸಭೆಯ ವೇಳೆ ಏಕಾಏಕಿ ಉಸಿರಾಟದ ಹಾಗೂ ಎದೆ ನೋವು ಸಮಸ್ಯೆ ಎದುರಿಸಿ ಅಸ್ವಸ್ಥರಾದರು. ಈ ವೇಳೆ ತಕ್ಷಣ ಕೌನ್ಸಿಲ್ ಸಭೆಯನ್ನು ಮುಂದೂಡಿದ ಮೇಯರ್ ಸಂಪತ್‍ರಾಜ್ ಸೇರಿದಂತೆ ಇತರೇ ಕಾರ್ಪೊರೇಟರ್ ಗಳು ರೂಪಾ ಅವರನ್ನು ಆಸ್ಪತ್ರೆ ದಾಖಲಿಸಲು ಎತ್ತಿಕೊಂಡು ಹೊರ ನಡೆದರು.
Advertisement
Advertisement
ಈ ವೇಳೆ ರೂಪಾ ಅವರಿಗೆ ಪಾಲಿಕೆಯ ವೈದ್ಯರಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು, ಪ್ರಥಮ ಚಿಕಿತ್ಸೆ ಬಳಿಕ ರೂಪಾ ಅವರು ಚೇತರಿಕೆ ಕಂಡರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇಯರ್ ಸಂಪತ್ ರಾಜ್, ತಮ್ಮ ಕಾರಿನಲ್ಲೇ ಕರೆದುಕೊಂಡು ಮಲ್ಯ ಆಸ್ಪತ್ರೆ ಕರೆದುಕೊಂಡು ಹೋದರು. ಸದ್ಯ ಮಲ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
ಇದಕ್ಕೂ ಮುನ್ನ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಸ್ವಾಗತಿಸಿದ ಕಾಂಗ್ರೆಸ್ ಪಕ್ಷದ ನಾಯಕ ಶಿವರಾಜ್, ಬಜೆಟ್‍ನಲ್ಲಿ ಬೆಂಗಳೂರಿಗೆ ಅನೇಕ ಕೊಡುಗೆ ನೀಡಲಾಗಿದೆ. ಮೆಟ್ರೋ, ರಸ್ತೆ, ಮೂಲಭೂತ ಸೌಕರ್ಯ ನೀಡಿರೋ ಬಗ್ಗೆ ಸ್ವಾಗತ. ಬೆಂಗಳೂರು ರೈತ ಸಮುದಾಯದ ಮೇಲೆ ಅವಲಂಬಿಸಿದ್ದು, ರೈತರ ಸಾಲ ಮನ್ನಾ ಮಾಡಿದಕ್ಕೆ ಅಭಿನಂದನೆ ಎಂದು ತಿಳಿಸಿದರು.