ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಬಿಬಿಎಂಪಿ ಚುನಾವಣೆ ಗೆದ್ದ ಆರೋಪ ಎದುರಿಸುತ್ತಿರುವ ನಗರದ ಕೆಪಿ ಅಗ್ರಹಾರ ಪಾಲಿಕೆ ಸದಸ್ಯೆ ಗಾಯತ್ರಿ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ನಗರ ಜಿಲ್ಲಾಧಿಕಾರಿಗಳ ಆದೇಶ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಒತ್ತಡದಿಂದ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ನನ್ನನ್ನು ಸಾಕಿದ್ದು ಅಜ್ಜಿ, ನನ್ನ ಅಪ್ಪ-ಅಮ್ಮ ಯಾರು ಎಂದು ಗೊತ್ತಿಲ್ಲ. ನನ್ನನ್ನು ನಾಯಕ ಎಂದಲೇ ಅಜ್ಜಿ ಶಾಲೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ನನ್ನ ಪತಿ ನಾಯ್ಡು. ಅದರೆ ನನ್ನ ತವರು ಜಾತಿ ಹೋಗಲ್ಲ. ನಾವೇನು ಸುಳ್ಳು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ರಾಜಕೀಯ ಒತ್ತಡ: ಕಾಂಗ್ರೆಸ್ ಸ್ಥಳೀಯ ಮುಖಂಡರ ಕುತಂತ್ರದಿಂದ ಈ ರೀತಿ ಅರೋಪ ಕೇಳಿ ಬರುತ್ತಿದೆ ಎಂದು ಪ್ರತ್ಯಾರೋಪ ಮಾಡಿದ ಗಾಯತ್ರಿ ಅವರು, ಶಾಲೆಯಲ್ಲಿ ಪೋಷಕರು ನೀಡಿರುವ ದಾಖಲೆ ಅನ್ವಯ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ಇದೇ ಕಾರಣಕ್ಕಾಗಿ ನಾನು ಮೂರು ವರ್ಷದಿಂದ ಕೋರ್ಟ್ ಗೆ ಅಲೆಯುತ್ತಿದ್ದೇನೆ. ನಾನು ಸುಳ್ಳು ದಾಖಲೆ ನೀಡಿಲ್ಲ, ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುತ್ತೇನೆ. ಸುಳ್ಳು ದಾಖಲೆ ನೀಡಿಲ್ಲ ಎಂದರು.
Advertisement
ಏನಿದು ಪ್ರಕರಣ:
ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್‍ಗೆ ತಂದೆ-ತಾಯಿ, ಜಾತಿ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ನಾಯಕ ಜಾತಿ ಹೆಸರಿನಲ್ಲಿ ನಗರದ ಕೆಪಿ ಆಗ್ರಹಾರದಲ್ಲಿರುವ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಕುರಿತು ದಾಖಲೆ ನೀಡಲಾಗಿತ್ತು. ಆದರೆ ಅವರ ಶೈಕ್ಷಣಿಕ ಆರ್ಹತೆ ಬಗ್ಗೆ ಶಾಲೆಯಲ್ಲಿ ಯಾವುದೇ ಪೂರಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಡಿಡಿಪಿಐ ಹಾಗೂ ಇತರೇ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.