ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಾಗ ನಡೆದ ಘನಘೋರ ಅಪಘಾತದಿಂದ ಆಸ್ಪತ್ರೆ ಸೇರಿದ್ದಾರೆ. ರಸ್ತೆ ದಾಟುತ್ತಿದ್ದಾಗ ಕಾರೊಂದು ಡಿಕ್ಕಿ (Car Accident) ಹೊಡೆದಿದ್ದು, ಯುವತಿ ಎತ್ತರಕ್ಕೆ ಹಾರಿಬಿದ್ದಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿಬೀಳುವಂತಿದೆ.
Advertisement
ವಿದ್ಯಾರ್ಥಿನಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಮೂಲದ ಈಕೆ ಮೈಸೂರು ಬೆಂಗಳೂರು ಹೈವೇಯಲ್ಲಿರುವ ಪಿಜಿನಲ್ಲಿ ಇದ್ದರು. ಅದೇ ರಸ್ತೆಯಲ್ಲಿರೋ ಬಿಮ್ಸ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಎ ಓದುತ್ತಿದ್ದರು. ಫೆಬ್ರವರಿ 2ರ ಮಧ್ಯಾಹ್ನ 1.30ರ ವೇಳೆಗೆ ಮೈಸೂರು ರಸ್ತೆ ಪಟ್ಟಣಗೆರೆ ಮೆಟ್ರೋ ನಿಲ್ದಾಣ (Metro Station) ಬಳಿಯ ಆರ್.ವಿ ಕಾಲೇಜು ಮುಂಭಾಗ ರಸ್ತೆ ದಾಟುತ್ತಿದ್ದ ಸ್ವಾತಿಗೆ, ಕೆಂಗೇರಿ ಕಡೆಯಿಂದ ಬಂದ ಕೆಂಪು ಕಾರು ಡಿಕ್ಕಿ ಹೊಡೆದಿದೆ. ಕೆಎ 51 ಎಂಎಚ್ 7575 ನಂಬರಿನ ಕಾರನ್ನು ಕೃಷ್ಣಭಾರ್ಗವ್ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಸ್ವಾತಿ ಕಾರಿನಿಂದ ಮೇಲೆ ಹಾರಿ ಪಲ್ಟಿ ಹೊಡೆದು ಬಿದ್ದಿದ್ದಾರೆ. ಬೆನ್ನು, ಕಾಲು ಮೊಳೆ ಮುರಿದಿದ್ದು, ತಲೆಗೂ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಅಪಘಾತ ಮಾಡಿದ ಕಾರು ಚಾಲಕ ಕೃಷ್ಣಭಾರ್ಗವ್ ಆರ್.ಆರ್.ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ. ಅಪಘಾತ ಬಳಿಕ ಕಾರು ನಿಲ್ಲಿಸದೇ ಯೂ ಟರ್ನ್ ಮಾಡಿಕೊಂಡು ಆರ್.ವಿ ಕಾಲೇಜಿನೊಳಗೆ ಹೋಗಿಬಿಟ್ಟಿದ್ದ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆತನನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ದೇವರ ದರ್ಶನ ಪಡೆದುಕೊಂಡ ಮರಳುವಾಗ ಕಂಟೇನರ್, ಕ್ರೂಸರ್ ವಾಹನ ಅಪಘಾತ- ಮಹಿಳೆ ಸಾವು
Advertisement
ಘಟನೆಗೆ ಬಿಬಿಎಂಪಿ ಹಾಗೂ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ ಕೆಂಗೇರಿ ಕಡೆಯಿಂದ ಬರುವ ರಸ್ತೆಯಲ್ಲಿ ಮೊದಲು ಹಂಪ್ ಹಾಕಲಾಗಿತ್ತು. 8 ತಿಂಗಳ ಹಿಂದೆ ಪ್ರಧಾನಿ ಮೋದಿ (Narendra Modi) ಇದೇ ಮಾರ್ಗವಾಗಿ ಬಂದಾಗ ಹಂಪ್ ಅನ್ನ ತೆಗೆದುಹಾಕಲಾಗಿದೆ. ಅಲ್ಲದೇ ಸಿಗ್ನಲ್ ಕೂಡ ಅಳವಡಿಸಿಲ್ಲ. ಹಾಗಾಗಿ ವಾಹನಗಳು ಅತಿ ವೇಗದಿಂದ ಬಂದು ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ಘಟನೆಗೆ ಪ್ರತಿಕ್ರಿಯೆ ಕೊಟ್ಟಿರುವ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿವಿಐಪಿ ಮೂವ್‍ಮೆಂಟ್ ಆದ್ಮೇಲೆ ಟ್ರಾಫಿಕ್‍ನವರು ಹೇಳಿದಂತೆ ಹಂಪ್ ಹಾಕುತ್ತಿದ್ದೇವೆ. ಇವತ್ತು ಘಟನೆ ನಡೆದಿರುವ ಜಾಗಕ್ಕೆ ಹಂಪ್ ಹಾಕುವಂತೆ ಟ್ರಾಫಿಕ್‍ನವರು ಮನವಿ ಕೊಟ್ಟಿರೋದು ಗೊತ್ತಿಲ್ಲ. ಇದನ್ನ ವಿಚಾರಣೆ ಮಾಡ್ತೇವೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k