ಬೆಂಗಳೂರು: ಬಿಬಿಎಂಪಿ ವತಿಯಿಂದ ನಡೆಸುತ್ತಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರಹಮತುನ್ನೀಸಾ ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಈ ಸಂಬಂಧ ಇಂದು ಪಾಲಿಕೆ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ಪಾಲಿಕೆ ಕೇಂದ್ರ ಕಚೇರಿಯಲ್ಲಿ ರಹಮತುನ್ನೀಸಾ ರವರನ್ನು ಸನ್ಮಾನಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಅಡಿಯಲ್ಲಿನ 475 ಪದವಿ ಕಾಲೇಜುಗಳಲ್ಲಿ 7 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಪೈಕಿ ಬಿಬಿಎಂಪಿ ವ್ಯಾಪ್ತಿಗೊಳಪಡುವ 4 ಪದವಿ ಕಾಲೇಜುಗಳಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎ, ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ಬಿಕಾಂ ಪರೀಕ್ಷೆಯಲ್ಲಿ ರೆಹಮತುನ್ನೀಸಾ 4,600 ಅಂಕಗಳಿಗೆ 4,226 (ಶೇ.91.87) ಅಂಕ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.
Advertisement
Advertisement
ಬಡತನದ ಹಿನ್ನೆಲೆ ಹೊಂದಿರುವ ರಹಮಾತುನ್ನೀಸಾ ಐಎಎಸ್ ಆಗುವ ಕನಸನ್ನು ಕಂಡಿದ್ದು, ಅವರ ಕನಸಿನ ಸಾಧನೆಗೆ ಪಾಲಿಕೆ ವತಿಯಿಂದ ಶುಭವನ್ನು ಕೋರುತ್ತಾ, ಅವಶ್ಯಕ ಸೌಲಭ್ಯಗಳನ್ನು ಪಾಲಿಕೆಯಿಂದ ಒದಗಿಸುವ ಭರವಸೆಯೂ ಇಂದು ನೀಡಲಾಯಿತು.
Advertisement
ರೆಹಮತುನ್ನೀಸಾ 4,600 ಅಂಕಗಳಿಗೆ 4,226 (ಶೇ.91.87) ಅಂಕ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅದಲ್ಲದೆ ಹರಿಜ ಸುಲ್ತಾನ (ಶೇ.91.8), ಉಮ್ಮೆ ಹನಿ(ಶೇ.89.7), ಉಮ್ಮೆ ಕುಲ್ಸಮ್(ಶೇ.84.8), ಅರ್ಷಿಯಾ ತಾಜ್(ಶೇ.83.8), ಅನೀಸ (ಶೇ.83.4), ಪಾಥಿಮುನ್ನೀಸಾ (ಶೇ.82.5), ಸಮ್ರೀನ್ ಬಾನು (ಶೇ.82.1), ಉಮ್ಮೆ ಅಸ್ಮಾ(ಶೇ.80.4), ಅಲ್ಮಸ್ ತಾಜ್ (ಶೇ.80.1) ಅಂಕ ಪಡೆದು ತೆರ್ಗಡೆಯಾಗಿದ್ದಾರೆ.