ಬೆಂಗಳೂರು: ಬಿಬಿಎಂಪಿಗೆ (BBMP) ರಸ್ತೆಗುಂಡಿಗಳನ್ನು (Road) ಇಷ್ಟು ದಿನಗಳಲ್ಲಿ ಮುಚ್ಚುತ್ತೇವೆ ಎನ್ನುವ ಡೆಡ್‍ಲೈನ್ ಕಾಮನ್ ಆಗಿದೆ. ಇದೀಗ ಕಮೀಷನರ್ ಹೊಸವರ್ಷಕ್ಕೆ (New Year) ಮತ್ತೊಂದು ಹೊಸ ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ಗುಂಡಿ (Potholes) ಮುಚ್ಚಿಲ್ಲ ಅಂದ್ರೇ ಸಂಬಳ (Salary) ಕಟ್ ಮಾಡುವ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಬೆಂಗಳೂರು (Bengaluru) ನಗರದಲ್ಲಿರುವ ಗುಂಡಿ ಮುಚ್ತೀವಿ ಮುಚ್ತೀವಿ ಅಂತ ಬಿಬಿಎಂಪಿ ಹೇಳಿದ್ದೆ ಬಂತು. ಜನರ ತೆರಿಗೆ ದುಡ್ಡು ನೀರಲ್ಲಿ ಹೋಮ ಮಾಡಿದ್ದೆ ಬಂತು. ಗುಂಡಿಗಳಿಗೆ ಮಾತ್ರ ಕಡಿವಾಣವೇ ಬೀಳ್ತಿಲ್ಲ. ಈ ಮಧ್ಯೆ ಕಮಿಷನರ್ ಹೊಸ ವರ್ಷಕ್ಕೆ ನೂತನ ಡೆಡ್‍ಲೈನ್ ಕೊಟ್ಟಿದ್ದಾರೆ. ಡಿ.31ರ ಒಳಗೆ ಎಲ್ಲಾ ಗುಂಡಿ ಮುಚ್ಚುವಂತೆ ಸೂಚಿಸಿದ್ದಾರೆ. ಹೊಸ ವರ್ಷಕ್ಕೆ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಮೂಲಕ ಜನರಿಗೆ ಹೊಸ ವರ್ಷದ ಮೊದಲ ಗಿಫ್ಟ್ ನೀಡೋಕೆ ಮುಂದಾಗಿದ್ದಾರೆ. ಇದನ್ನೂ ಓದಿ: 5 ಲಕ್ಷದ ವಾಚ್ ವಿವಾದ: ದೇಶಭಕ್ತಿಯ ಟ್ವಿಸ್ಟ್ ನೀಡಿ ಸವಾಲೆಸೆದ ಅಣ್ಣಾಮಲೈ
Advertisement
Advertisement
ಗುಂಡಿ ಗಂಡಾಂತರಕ್ಕೆ ಮೂಲ ಕಾರಣವೇ BWSSB, BESCOM ಎಂದು ಬಿಬಿಎಂಪಿ ದೂರುತ್ತಿದೆ. ನಾವೆಲ್ಲಾ ಕಾಮಗಾರಿ ಮಾಡ್ತಾ ಕಂಪ್ಲೀಟ್ ಮಾಡ್ತಿದ್ರೆ, ಈ ಎರಡೂ ಸಂಸ್ಥೆಗಳು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್‌ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ನಮ್ಮ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಹಾಗೇನಾದ್ರು ಮಾಡಲಿಲ್ಲ ಅಂದ್ರೆ ನಮ್ಮ ವಾರ್ಡ್ ಹಾಗೂ ಮೇಜರ್ ರೋಡ್ ಇಂಜಿನಿಯರ್‌ಗಳ ಸಂಬಳವನ್ನು ಕಡಿತ ಮಾಡಿ ರಸ್ತೆ ದುರಸ್ತಿ ಮಾಡ್ತೇವೆ ಎಂದು ಕಮಿಷನರ್ ತುಷಾರ್ ಗಿರಿನಾಥ್ (Tushar Girinath) ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಅವರ ಭಾಷೆಯಲ್ಲೇ ಉತ್ತರಿಸಿ: NCP ನಾಯಕ
Advertisement
ಆಗುವ ಕೆಲಸವನ್ನು ಮಾಡೋದು ಬಿಟ್ಟು, ಕಮಿಷನರ್ ಬರಿ ಶಿಸ್ತು ಕ್ರಮ, ಸಂಬಳ ಕಡಿತ, ಡೆಡ್‍ಲೈನ್ ಅಂತ ಹೇಳಿಕೆ ಕೊಡ್ತಾರೆ. ಪಾಲಿಕೆ ಇಂಜಿನಿಯರ್‌ಗಳು ಕಮಿಷನರ್ ಅವರ ಮಾತನ್ನೇ ಕೇಳೋಲ್ಲ. ಇವರೇನಾದ್ರೂ ಇಂಜಿನಿಯರ್‌ಗಳ ಸಂಬಳ ಕಡಿತ ಮಾಡಿದ್ರೆ, ಅವರೆಲ್ಲಾ ಸೇರಿ ಇವರ ವರ್ಗಾವಣೆಯನ್ನೇ ಮಾಡಿಸಿ ಬಿಡ್ತಾರೆ. ಇದು ಬಿಬಿಎಂಪಿಯಲ್ಲಿರೋ ವ್ಯವಸ್ಥೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.