ಬೆಂಗಳೂರು: ಜ್ವರದಿಂದ ಬಳಲುತ್ತಿದ್ದ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಬೆಂಗಳೂರಿನ (Bengaluru) ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತುಷಾರ್ ಗಿರಿನಾಥ್ ಅವರು ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದರು. ಇದರ ಜೊತೆಗೆ ಕಳೆದ ಶನಿವಾರದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪರಿಶೀಲನೆಗೆ ಒಳಪಡಿಸಿದಾಗ ಯೂರಿನರಿ ಇನ್‍ಫೆಕ್ಷನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಔಷಧ ಹಾಗೂ ಇಂಜೆಕ್ಷನ್ ನೀಡಲಾಗಿತ್ತು. ಆದರೂ ಜ್ವರ ಕ್ಷೀಣಿಸದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತುಷಾರ್ ಗಿರಿನಾಥ್ ಆಪ್ತರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ
ಇತ್ತ ಚಿಲುಮೆ (Chilume) ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತೀವ್ರವಾಗಿ ನಡೆಯುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಸಮಯದಲ್ಲೇ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಹಾಗೂ ಒತ್ತಡದಿಂದಲೇ ಜ್ವರ ಕಾಣಿಸಿಕೊಂಡಿತೇ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಂಡಿತರಿಗೆ ಕೇಂದ್ರದಿಂದ ಗುಡ್‍ನ್ಯೂಸ್ – ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಚಿಂತನೆ