ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಗೇನು ಬರವಿಲ್ಲ. ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಬೆಟ್ಟ ಕಿತ್ತು ಗುಂಡಿ ಕಂಡಂತೆ ಕಥೆ ಹೇಳುತ್ತಲೇ ಇರುತ್ತದೆ. ಜನರಂತೂ ನಮ್ಮ ರೋಡ್ ರೆಡಿ ಮಾಡಿ, ನಮ್ ರೋಡ್ ರೆಡಿ ಮಾಡಿ ಅಂತಲೇ ಇರ್ತಾರೆ. ಹೀಗಿರುವಾಗ ನಮ್ ಏರಿಯಾ ಬೇಡ – ನಮ್ ಏರಿಯಾಗೆ ವೈಟ್ ಟಾಪಿಂಗ್ ಬೇಡ ಎನ್ನುತ್ತಿದ್ದರೂ, ಪಾಲಿಕೆ ಮಾತ್ರ ಬಿಡ್ತಿಲ್ಲ. ರಸ್ತೆ ಹೈಟೆಕ್ ಮಾಡಿಯೇ ಮಾಡ್ತೀವಿ ಎನ್ನುತ್ತಿದೆ.
Advertisement
ತರಳಬಾಳು ರಸ್ತೆ ಆರ್.ಟಿ ನಗರ ಮೂಲಕ ಬಳ್ಳಾರಿ ರಸ್ತೆಗೆ ಸಂಪರ್ಕ ನೀಡುವ ರಸ್ತೆಯಾಗಿದೆ. ವಾಹನಗಳ ಸಂಚಾರ ಯಥೇಚ್ಛವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ದಿಗಾಗಿ 29 ಕೋಟಿ ಖರ್ಚು ಮಾಡಲು ಪಾಲಿಕೆ ಸಜ್ಜಾಗಿ ಟೆಂಡರ್ ಕರೆದಿದೆ. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: 3 ಸಾವಿರ ಕೆಜಿ ಪ್ಲಾಸ್ಟಿಕ್‌ನಿಂದ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಯ್ತು ರಸ್ತೆ – ಏನಿದರ ವಿಶೇಷ?
Advertisement
Advertisement
ಸುಮಾರು 4.6 ಕಿಮೀ ರಸ್ತೆಗೆ ಕಳೆದ ಒಂದು ವರ್ಷ ಮೂರು ತಿಂಗಳಲ್ಲಿ ಎರಡೆರಡು ಬಾರಿ ಕಾಮಗಾರಿಗಳು ನಡೆದಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಮೇಲೆ ರಾತ್ರೋರಾತ್ರಿ ರಸ್ತೆ ಸರ್ಕಲ್ ಬ್ಯೂಟಿಫಿಕೇಶನ್ ಮಾಡಲಾಯ್ತು. ರಸ್ತೆ ಟ್ರಾಫಿಕ್ ಮಾರ್ಕಿಂಗ್, ಫುಟ್ ಪಾತ್ ಅಭಿವೃದ್ಧಿ ಶರವೇಗದಲ್ಲಿ ನಡೆಯಿತು. ಕಳೆದ ಮೂರು ತಿಂಗಳ ಹಿಂದೆ ಯೂಟಿಲಿಟಿ ಶಿಫ್ಟ್ ಎಂದು 600 ಮೀಟರ್ ಗೆ ಡಾಂಬರೀಕರಣ ಕಾಮಗಾರಿ 6 ತಿಂಗಳ ಒಳಗೆ ಮುಗಿದಿದೆ. ಆದರೂ ಈಗ ಮತ್ತೆ ವೈಟ್ ಟಾಪಿಂಗ್ ರಸ್ತೆ ಬೇಕಾ ಎಂದು ಹಲವು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಂದು ಗಂಟೆಯ ಹಗ್‌ಗೆ 7 ಸಾವಿರ ಸಂಭಾವನೆ ಪಡೀತಾನೆ ಈ ವ್ಯಕ್ತಿ!
Advertisement
ವೈಟ್ ಟಾಪಿಂಗ್ ರಸ್ತೆ ಮಾಡಲು ಮಾನದಂಡಗಳು ಹೀಗಿದೆ:
* ಮೇಜರ್, ಸಬ್ ಆರ್ಡಿಯಲ್ ರೋಡ್ ಗಳ ಆಯ್ಕೆ
* ಸರ್ಕಾರ,ಸ್ಥಳೀಯ ಶಾಸಕರ ಶಿಫಾರಸು ಮೇಲೆ ಆಯ್ಕೆ
ನಗರದಲ್ಲಿ ಪ್ರತಿ ವಾರ ಫಿಕ್ಸ್ ಮೈ ಸ್ಟ್ರೀಟ್ ಆಪ್ ಮೂಲಕ ಗುಂಡಿಗಳ ಲೆಕ್ಕ ನೋಡಿದ್ರೆ ಪ್ರತಿ ವಾರ ಒಂದೂ ಸಾವಿರ ಗುಂಡಿಗಳು ಹೆಚ್ಚುತ್ತಲೇ ಇದೆ. ಹೀಗಿರುವಾಗ ಒಂದೂ ಗುಂಡಿ ಇಲ್ಲದ ರಸ್ತೆಗೆ ವೈಟ್ ಟಾಪಿಂಗ್ ಬೇಕಾ ಎಂದರೆ ಸದ್ಯ ವಾಹನ ಸವಾರರ ದೃಷ್ಟಿಯಿಂದ ದೀರ್ಘಕಾಲಿಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಚೀಫ್ ಇಂಜಿನಿಯರ್ ಲೋಕೇಶ್ ಸಮರ್ಥಿಸಿಕೊಳ್ಳುತ್ತಿದ್ದಾರೆ.