ಬೆಂಗಳೂರು: ರಸ್ತೆ ಗುಂಡಿಗಳ ಭೀಕರತೆ ಕಡಿಮೆ ಆಯಿತು ಎನ್ನುವಷ್ಟರಲ್ಲೇ ಇದೀಗ ಚರಂಡಿ ಕಾಮಗಾರಿ ಗುಂಡಿಗಳ ಭೀಕರತೆ ಕಾಣತೊಡಗಿದೆ.
ಬಿಬಿಎಂಪಿಯ (BBMP) ಹಾಗೂ ಜಲಮಂಡಳಿ (BWSSB) ಕಾಮಗಾರಿಗಳೇ ಹೀಗೆ ಎನ್ನುವಂತೆ ಆಗಿದೆ. ಒಂದಲ್ಲ ಒಂದು ಸಮಸ್ಯೆಗಳು ಇರುತ್ತವೆಯೇ ಎನ್ನುವಂತಹ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುವಂತಾಗಿದೆ. ಇತ್ತೀಚಿಗಷ್ಟೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎನ್ನುವ ಡೆಡ್‌ಲೈನ್ ನೀಡಿದ ಮೇಲೆ ನಗರದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಯಿತು. ಇದೀಗ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿಗಳು ಕಾಣತೊಡಗಿವೆ.ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ನಕಲಿ ಎಸ್‍ಬಿಐ ಬ್ರಾಂಚ್ ತೆರೆದು ವಂಚನೆ – ಮೂವರು ಅರೆಸ್ಟ್
Advertisement
Advertisement
ನಗರದ ಕಾಡುಮಲ್ಲೇಶ್ವರ ವಾರ್ಡ್ ಪ್ರಮುಖ ರಸ್ತೆಯಲ್ಲಿ ಚರಂಡಿ ಕಾಮಗಾರಿಯೊಂದು ಅರ್ಧಕ್ಕೆ ನಿಂತಿದೆ. ವಾರ್ಡ್ನ 15ನೇ ಮುಖ್ಯ ರಸ್ತೆಯ ಬಳಿ ಬೃಹತ್ ಗುಂಡಿ ಅಗೆದು ಈಗಾಗಲೇ ಮೂರ್ನಾಲ್ಕು ತಿಂಗಳು ಕಳೆದಿದೆ. ಆದರೆ ಕಾಮಗಾರಿ ಮುಗಿದಿಲ್ಲ. ಭಯಾನಕ ಗುಂಡಿ ಹೇಗಿದೆ ಎಂದರೆ ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸ್ವಲ್ಪ ಯಾಮಾರಿದರೂ ದೇವರಪಾದ ಸೇರುವಂತಿದೆ.
Advertisement
ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಕೇಳಿದರೂ ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುವುದು ಸ್ವತಃ ಅವರಿಗೂ ಗೊತ್ತಿಲ್ಲದಂತಿದೆ. ಸದ್ಯ ನಗರದ ಕಾಮಗಾರಿಗಳೇ ಹೀಗೆನಾ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಕಾಮಗಾರಿ ಶುರುವಾಗುವುದು ಅಷ್ಟೇ ಯಾವಾಗ ಮುಗಿಯುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ.
Advertisement
ಪ್ರಮುಖ ರಸ್ತೆಯಲ್ಲೇ ಕಾಮಗಾರಿ ಅರ್ಧಕ್ಕೆ ಬಿಟ್ಟು ಮೃತ್ಯು ಕೂಪವಾಗಿಸಿರುವ ಪಾಲಿಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಅನಾಹುತಕ್ಕೆ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.ಇದನ್ನೂ ಓದಿ: ದಿನ ಭವಿಷ್ಯ: 30-09-2024