– ಬಜೆಟ್ ಮೊತ್ತ 10 ಸಾವಿರ ಕೋಟಿ ರೂ. ದಾಟೋ ಸಾಧ್ಯತೆ
ಬೆಂಗಳೂರು: ಬಿಬಿಎಂಪಿಯಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತದ ಮೂರನೇ ಬಜೆಟ್ ಇಂದು ಮಂಡನೆಯಾಗಲಿದೆ.
ಇದು ಜೆಡಿಎಸ್ ನಿಂದ ಮಂಡನೆಯಾಗ್ತಿರೋ ಮೊದಲ ಬಜೆಟ್. ಕಳೆದೆರಡು ವರ್ಷಗಳಿಂದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಸದಸ್ಯರಿಗೆ ಸಿಕ್ಕಿತ್ತು. ಆದರೆ ಈ ಬಾರಿ ಜೆಡಿಎಸ್‍ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆತಿದೆ. ಹೀಗಾಗಿ ಈ ಬಾರಿ ಜೆಡಿಎಸ್ ಪಕ್ಷದ ಶಾಸಕರು ಮತ್ತು ಸದಸ್ಯರಿಗೆ ಅನುಕೂಲವಾಗುವಂತಹ ಬಜೆಟ್ ಮಂಡಿಸಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ.
Advertisement
Advertisement
ಈ ಬಾರಿ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ಗಡಿ ದಾಟುವ ನಿರೀಕ್ಷೆ ಇದ್ದು, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರೋ ಜೆಡಿಎಸ್ ನ ಮಹದೇವಪ್ಪ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಸರ್ಕಾರದ 4 ಸಾವಿರ ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ 1 ಸಾವಿರ ಕೋಟಿ ರೂ. ಅನುದಾನದ ಜೊತೆಗೆ ಆಸ್ತಿ ತೆರಿಗೆ, ಜಾಹೀರಾತು ಶುಲ್ಕ ಸೇರಿ ಇನ್ನಿತರ ಮೂಲಗಳಿಂದ 5 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆ ಹೊಂದಲಾಗುತ್ತಿದೆ.
Advertisement
Advertisement
ಆ ಹಣವನ್ನು ಯಾವುದಕ್ಕೆ ಖರ್ಚು ಮಾಡಬಹುದು ಎಂಬುದನ್ನು ಈಗಾಗಲೇ ಲೆಕ್ಕ ಹಾಕಲಾಗಿದ್ದು, ಇಂದು ಅದನ್ನು ಘೋಷಿಸಲಾಗುತ್ತಿದೆ.
ಬಿಬಿಎಂಪಿ ಬಜೆಟ್ ನ ನಿರೀಕ್ಷಿತ ಯೋಜನೆಗಳು ಹೀಗಿವೆ.
* 18 ಮಾರುಕಟ್ಟೆಗಳ ಮರುನಿರ್ಮಾಣಕ್ಕೆ 150 ಕೋಟಿ ರೂ
* 10 ಹೊಸ ಮಾರುಕಟ್ಟೆಗಳ ಸ್ಥಾಪನೆ
* 50 ಮಾರುಕಟ್ಟೆ ದುರಸ್ಥಿಗೆ ತಲಾ 1 ಕೋಟಿ ರೂ. ನಿಗದಿ
* ಗರುಡಾ ಮಾಲ್ ಮಾದರಿಯಲ್ಲಿ ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿ
* SSLC ಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ. ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ 30 ಸಾವಿರ ರೂ. ಶಿಷ್ಯ ವೇತನ
*ಬಿಬಿಎಂಪಿ ಆಟದ ಮೈದಾನ ಅಭಿವೃದ್ಧಿ ಮತ್ತು ಮಲ್ಟಿ ಜಿಮ್ ನಿರ್ಮಿಸಲು 4 ಕೋಟಿ ರೂ. ಮೀಸಲು
* ಬಿಬಿಎಂಪಿ ಶಾಲಾ ವಿದ್ಯಾರ್ಥಿಗಳಿಗೆ ಎಲ್‍ಇಡಿ ಮೂಲಕ ಪಾಠ, 3 ಕೋಟಿ ರೂ ನಿಗದಿ.
* ಬೈಕ್ ಅಂಬುಲೆನ್ಸ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಗೆ 1 ಕೋಟಿ ರೂ. ಮೀಸಲು
* ಬಿಬಿಎಂಪಿ ರೆರಲ್ ಆಸ್ಪತ್ರೆಗಳಲ್ಲಿನ ವಸತಿ ಗೃಹಗಳ ದುರಸ್ತಿಗೆ 3 ಕೋಟಿ ರೂ.
* ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಮಾದರಿಯ ಯೋಜನೆ ಜಾರಿಗೆ 3 ಕೋಟಿ ರೂ.
* ಒಂಟಿ ಮನೆ ಯೋಜನೆ ಅನುದಾನ 4 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ
* 8 ವಲಯಗಳಲ್ಲೂ ತಲಾ ಒಂದು ಹೆಲಿಪ್ಯಾಡ್ ನಿರ್ಮಾಣ
* ಸಿದ್ದಯ್ಯ ರಸ್ತೆ ಮತ್ತು ದಾಸಪ್ಪ ಆಸ್ಪತ್ರೆಗಳಲ್ಲಿ ಐಸಿಯು ನಿರ್ಮಾಣ
* ವೈದ್ಯಕೀಯ ಬಿಲ್ ಮೊತ್ತ ಹೆಚ್ಚಳ
ಇವಿಷ್ಟು ಸೇರಿದಂತೆ ಹಲವು ವಿಶೇಷ ಯೋಜನೆಗಳನ್ನು ಇಂದಿನ ಬಜೆಟ್ ನಲ್ಲಿ ನಿರೀಕ್ಷಿಸಬಹುದಾಗಿದೆ.