ಬೆಂಗಳೂರು: ನಗರದ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹೊಸ ಸೂತ್ರ ಕಂಡು ಹಿಡಿದಿದೆ. ನೀವು ಆಟವಾಡುವ ಬಿಬಿಎಂಪಿ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಬರುವ ಸಾಧ್ಯತೆ ದಟ್ಟವಾಗಿ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಗೋಚರಿಸಿದೆ.
Advertisement
ವಾಹನ ಸಾಂದ್ರತೆ ಇರುವ ಪ್ರದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್ (Underground Parking facilities below Play Grounds) ಎಂಬ ವಿನೂತನ ಯೋಜನೆ ಜಾರಿಗೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್ ನಿರ್ಮಾಣ
Advertisement
Advertisement
ಆಟದ ಮೈದಾನಕ್ಕೆ ಏನೂ ಆಗಲ್ಲ!
ಅಂಡರ್ ಗ್ರೌಂಡ್ ಪಾರ್ಕಿಂಗ್ ಯೋಜನೆಯಿಂದ ಆಟದ ಮೈದಾನದ ಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪಿಪಿಪಿ ಆಧಾರದಲ್ಲಿ ಅನುಷ್ಠಾನಗೊಳಿಸಲು ಈ ವರ್ಷ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ